Thursday, July 25, 2024
Homeರಾಷ್ಟ್ರೀಯಸೇನಾ ಅಭ್ಯಾಸ ನಿರತರಾಗಿದ್ದ ಐವರು ಯೋಧರು ನೀರಿನಲ್ಲಿ ಕೊಚ್ಚಿಹೋಗಿ ಹುತಾತ್ಮ

ಸೇನಾ ಅಭ್ಯಾಸ ನಿರತರಾಗಿದ್ದ ಐವರು ಯೋಧರು ನೀರಿನಲ್ಲಿ ಕೊಚ್ಚಿಹೋಗಿ ಹುತಾತ್ಮ

ಲೇಹ್:‌ ನದಿಯೊಂದರಲ್ಲಿ ಸೇನಾ ಅಭ್ಯಾಸದ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾದ ಕಾರಣ ಐವರು ಯೋಧರು ಹುತಾತ್ಮರಾಗಿದ್ದಾರೆ. ದೌಲತ್‌ ಬೇಗ್‌ ಓಲ್ಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಶುಕ್ರವಾರ ತಡರಾತ್ರಿ 1 ಗಂಟೆಗೆ ನದಿ ದಾಟುವ ಅಭ್ಯಾಸ ನಡೆಸಲಾಗುತ್ತಿತ್ತು. ಈ ವೇಳೆ ನದಿ ನೀರು ಹಠಾತ್‌ ಏರಿಕೆಯಾಗಿದೆ. ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಒಂದು ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇನ್ನುಳಿದ ನಾಲ್ವರ ಶವ ಪತ್ತೆಯಾಗಿಲ್ಲ.


ಘಟನೆಯ ವೇಳೆ ಯೋಧರು ಟ್ಯಾಂಕ್‌ನಲ್ಲಿದ್ದರು. ಟ್ಯಾಂಕ್‌ ಅಪಘಾತಕ್ಕೀಡಾಗಿತ್ತು. ಮೃತರಲ್ಲಿ ಒಬ್ಬರು ಜೂನಿಯರ್‌ ಕಮಿಷನ್ಡ್‌ ಆಫಿಸರ್‌ ಕೂಡ ಇದ್ದರು. ಮಂದಿರ್‌ ಮೋರ್‌ ಬಳಿ ಬೋಧಿ ನದಿಯನ್ನು ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular