ರಾಮನಗರ: ಜಿಲ್ಲೆಯ ಚನ್ನಪಟ್ಟಣದಲ್ಲಿ ಮದುವೆ ಸಮಾರಂಭವೊಂದರಲ್ಲಿ ಐಸ್ ಕ್ರೀಂ ತಿಂದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಐಸ್ ಕ್ರೀಂ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ ಭೇದಿಯಾಗಿದೆ. ಅಸ್ವಸ್ಥರಾದವರನ್ನು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸಾತನೂರು ಸರ್ಕಲ್ ಬಳಿ ಭಾನುವಾರ ವಿವಾಹ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಮದುವೆಗೆ ಆಗಮಿಸಿದವರಿಗೆ ಬಿರಿಯಾನಿ ಮತ್ತು ಊಟದ ಬಳಿಕ ಐಸ್ ಕ್ರೀಂ ಇತ್ತು. ಐಸ್ ಕ್ರೀಂ ತಿಂದ ಅರ್ಧ ಗಂಟೆ ಬಳಿಕ ಊಟ ಮಾಡಿದವರಿಗೆ ವಾಂತಿ, ಭೇದಿಯಾಗಿದೆ.
ಅವಧಿ ಮೀರಿದ ಐಸ್ ಕ್ರೀಂ ನೀಡಿದ್ದು, ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಯಾರಿಗೂ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.