ಬ್ರಹ್ಮಾವರ: ಇಂದು(ಮೇ.8) ಬ್ರಹ್ಮಾವರದ ಬಸ್ ಸ್ಟಾಂಡಿನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸುಮಾರು 500 ಲೋಟ ಮಜ್ಜಿಗೆಯನ್ನು ಜಯಂಟ್ಸ್ ಗ್ರೂಪ್ ಮತ್ತು ಜನೌಷಧಿ ಬ್ರಹ್ಮಾವರದ ವತಿಯಿಂದ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಾರಂಬಳ್ಳಿ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ. ಆರ್, ಉಪಾಧ್ಯಕ್ಷರಾದ ಉಮಾಬಾಯಿ, ಸದಸ್ಯರಾದ ನವೀನ್ ನಾಯಕ್ ಮತ್ತು ಸದಾನಂದ ಪೂಜಾರಿ, ಕಾರ್ಯದರ್ಶಿ ಶೇಖರ್ ನಾಯಕ್ ಹಾಗೂ ಸಿಬ್ಬಂದಿಗಳು, ಜಯಂಟ್ಸ್ ಗ್ರೂಪ್ ಮತ್ತು ಜನಔಷಧಿ ಬ್ರಹ್ಮಾವರದ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಮಧುಸೂಧನ್ ಹೇರೂರು, ಮಿಲ್ಟನ್ ಒಲಿವೆರ, ಶ್ರೀನಾಥ್ ಕೋಟ,ವಿಲ್ಸನ್ ಡಿಸಿಲ್ವ, ಪ್ರತಿಭಾ ಪೂಜಾರಿ ರೊನಾಲ್ಡ್ ಡಯಾಸ್,ಪ್ರದೀಪ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಬ್ರಹ್ಮಾವರದ ಜಯಂಟ್ಸ್ ಗ್ರೂಪ್ ಮತ್ತು ಜನೌಷಧಿ ವತಿಯಿಂದ 500 ಲೋಟ ಮಜ್ಜಿಗೆ
RELATED ARTICLES