ನವದೆಹಲಿ: ಕಳೆದ ಏಳೆಂದು ತಿಂಗಳಿನಿಂದ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ಖಾಸಗಿ ಟೆಲಿಕಾಂ ಕಂಪನಿಗಳಾಗಿರುವ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾಗೆ ಹಂತ ಹಂತವಾಗಿ ಟಕ್ಕರ್ ಕೊಡುತ್ತಾ ತನ್ನ ಗ್ರಾಹಕರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳುತ್ತಿದೆ.
TRAI ಹೊಸ ನಿಯಮಗಳಿಂದ ಖಾಸಗಿ ಕಂಪನಿಗಳ ಟೆನ್ಷನ್ ಹೆಚ್ಚಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯಲ್ಲಿ 6 ತಿಂಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆಗೊಳಿಸಿದೆ. ಬೆಲೆ ಏರಿಕೆ ಮಾಡಿಕೊಂಡ ಬಳಿಕ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಏರ್‌ಟೆಲ್ ಮತ್ತು ಜಿಯೋಗೆ ಬಿಎಸ್‌ಎನ್‌ಎಲ್ ನೀಡುತ್ತಿರುವ ಪ್ಲಾನ್ ಬಿಸಿತುಪ್ಪವಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷನೆ ಮಾಡುತ್ತಿದ್ದಾರೆ.
BSNL’s 180-day plan
ಬಿಎಸ್‌ಎನ್‌ಎಲ್ ಮಧ್ಯಮ ವರ್ಗದ ಜನತೆಯ ಜೇಬಿಗೆ ಹಿತಕಾರಿಯಾದ 180 ದಿನ ವ್ಯಾಲಿಡಿಟಿ ಪ್ಲಾನ್ ಬಿಡುಗಡೆಗೊಳಿಸಿದೆ. 180 ದಿನ ವ್ಯಾಲಿಡಿಟಿ ಪ್ಲಾನ್ ಬೆಲೆ 897 ರೂಪಾಯಿ ಆಗಿದೆ. ಮಾಸಿಕವಾಗಿ ನೋಡೋದಾದ್ರೆ ಕೇವಲ 150 ರೂಪಾಯಿ ಆಗಲಿದೆ. ಈ ಮೂಲಕ 200 ರೂ.ಗೂ ಕಡಿಮೆ ಬೆಲೆಯಲ್ಲಿ ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆಗೊಳಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ಲಾನ್‌ನಡಿಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ದೆಹಲಿ ಮತ್ತು ಮುಂಬೈ ಬಳಕೆದಾರರು MTNL ನೆಟ್‌ವರ್ಕ್‌ನಲ್ಲಿ ಉಚಿತ ಕರೆ ಮಾಡಬಹುದು.
ಹೆಚ್ಚುವರಿಯಾಗಿ ಈ ಯೋಜನೆಯು ಯಾವುದೇ ದೈನಂದಿನ ಮಿತಿಯಿಲ್ಲದೆ 90GB ಡೇಟಾವನ್ನು ಒದಗಿಸುತ್ತದೆ. ಈ ಪ್ಲಾನ್‌ನಲ್ಲಿ 180 ದಿನಕ್ಕೆ ಒಟ್ಟು 90GB ಡೇಟಾ ಲಭ್ಯವಾಗುತ್ತದೆ. ಡೇಟಾ ಪ್ಯಾಕ್ ಮುಕ್ತಾಯವಾದ ಬಳಿಕ ಇಂಟರ್‌ನೆಟ್ ಸ್ಪೀಡ್ 40 kbps ಆಗುತ್ತದೆ. ಇದರ ಜೊತೆಯಲ್ಲಿ ಗ್ರಾಹಕರಿಗೆ ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಬಿಎಸ್‌ಎನ್‌ಎಲ್ ಸೆಕೆಂಡರಿ ಸಿಮ್ ಆಗಿ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಲಿದೆ. ಕಡಿಮೆ ಬೆಲೆಯಲ್ಲಿ ಸಿಮ್ ಆಕ್ಟಿವ್ ಮಾಡಿಕೊಳ್ಳೋದರ ಜೊತೆ ಗ್ರಾಹಕರಿಗೆ 90GB ಡೇಟಾ ಜೊತೆ ಎಸ್‌ಎಂಸ್, ಅನ್‌ಲಿಮಿಟೆಡ್ ಕಾಲ್ ಮಾಡುವ ಸೌಲಭ್ಯವೂ ಸಿಗುತ್ತದೆ.