ಶ್ರೀ ಶಾರದಾಂಬಿಕ ಭಜನಾ ಮಂದಿರ ಶಾರದಾ ನಗರ ಸಜೀಪ ಮುನ್ನೂರು 66ನೇ ವಾರ್ಷಿಕೋತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮ ಜ್ಯೋತಿ ಬೆಳಗುವುದರ ಮೂಲಕ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿ ಈ ಶ್ರದ್ಧಾ ಕೇಂದ್ರದಲ್ಲಿ ಜರಗುವ ಕಾರ್ಯಕ್ರಮಗಳಿಂದ ಊರಿನ ನಾಗರಿಕರ ಧಾರ್ಮಿಕ ಪ್ರಜ್ಞೆ ಜಾಗೃತವಾಗಲಿ ಎಂಬುದಾಗಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಹಾಬಲ ಎಂ ಕೊಟ್ಟಾರಿ ವಹಿಸಿ ಶ್ರೀ ಶಾರದಾ ಮಾತೆಯ ಅನುಗ್ರಹದಿಂದ ಗ್ರಾಮ ಅಭಿವೃದ್ಧಿಯನ್ನು ಹೊಂದಲಿ ವಿದ್ಯಾರ್ಥಿಗಳು ಒಳ್ಳೆಯ ವಿದ್ಯೆಯನ್ನು ಹೊಂದಿ ಸ್ವಾವಲಂಬಿಗಳಾಗಲಿ ಎಂಬುದಾಗಿ ನುಡಿದರು ವೇದಿಕೆಯಲ್ಲಿ ಪ್ರೇಮ ಜಿ ಶೆಟ್ಟಿ ಸಂಘದ ಅಧ್ಯಕ್ಷ ಸತೀಶ ಗಟ್ಟಿ ಶಂಕರನಾರಾಯಣ ಭಟ್ ಗ್ರಾಮ ಪಂಚಾಯತ್ ಸದಸ್ಯ ಸುಂದರ ಪೂಜಾರಿ ಕೆ ನಾರಾಯಣ ಐತಾಳ ಸರೋಜಿನಿ ಶಾರದಾ ಯುವಕ ಸಂಘದ ಅಧ್ಯಕ್ಷ ಪರಮೇಶ್ವರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು ನಮ್ಮ ಫ್ರೆಂಡ್ಸ್ ಶಾರದಾ ನಗರ ಪ್ರಾಯೋಜಕತ್ವದಲ್ಲಿ ಜೋಡು ದೀಟಿಗೆ ಜಾನಪದ ನಾಟಕ ಸ್ಥಳೀಯ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ಏಕಾಹ ಭಜನಾ ಪ್ರಯುಕ್ತ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಸತ್ಯನಾರಾಯಣ ಪೂಜೆ ಆಶ್ಲೇಷ ಪೂಜೆ ಸರಸ್ವತಿ ಯಾಗ ಅನ್ನದಾನದೊಂದಿಗೆ ಜರಗಿತು.
