Monday, July 15, 2024
HomeUncategorizedಪ್ರವಾಸಿಗರ ಕಣ್ಣೆದುರೇ ಕೊಚ್ಚಿ ಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು! | ಬೆಚ್ಚಿ ಬೀಳುವ...

ಪ್ರವಾಸಿಗರ ಕಣ್ಣೆದುರೇ ಕೊಚ್ಚಿ ಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು! | ಬೆಚ್ಚಿ ಬೀಳುವ ಭಯಾನಕ ವಿಡಿಯೋ ವೈರಲ್!

ಮುಂಬೈ: ಜಲಪಾತ ವೀಕ್ಷಣೆಗೆಂದು ತೆರಳಿದ್ದ ಒಂದೇ ಕುಟುಂಬದ ಏಳು ಮಂದಿ ಪ್ರವಾಸಿಗರ ಕಣ್ಣೆದುರೇ ಪ್ರವಾಹದಲ್ಲಿ ಕೊಚ್ಚಿ ಹೋದ ದಾರುಣ ಘಟನೆ ಲೋನವಾಲ ಜಲಪಾತದಲ್ಲಿ ನಡೆದಿದೆ. ಪುಣೆ ಮೂಲದ ಶಾಹಿಸ್ತಾ ಅನ್ಸಾರಿ (36), ಅಮೀಮಾ ಅನ್ಸಾರಿ (13), ಉಮೇರಾ ಅನ್ಸಾರಿ (8) ಎಂಬವರು ಮೃತಪಟ್ಟಿದ್ದು, ಅವರ ಶವಗಳು ಪತ್ತೆಯಾಗಿವೆ. ಅದ್ನಾನ್‌ ಅನ್ಸಾರಿ (4), ಮರಿಯಾ ಸೈಯದ್‌ (9) ನಾಪತ್ತೆಯಾಗಿದ್ದಾರೆ.
ಪುಣೆಯ ಸೈಯದ್‌ ನಗರದ ಕುಟುಂಬವೊಂದು ಭಾನುವಾರ ರಜಾ ದಿನವಾದುದದರಿಂದ ಮುಂಬೈಯಿಂದ 80 ಕಿ.ಮೀ. ದೂರದಲ್ಲಿರುವ ಭೂಶಿ ಅಣೆಕಟ್ಟಿನ ಹಿನ್ನೀರಿನ ಲೋನವಾಲ ಜಲಪಾತ ವೀಕ್ಷಣೆಗೆಂದು ಬಂದಿದ್ದರು. ಈ ವೇಳೆ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಕುಟುಂಬದ ಸದಸ್ಯರು ನೀರಿನ ನಡುವೆ ಆಟವಾಡಲು ತೆರಳಿದ್ದಾರೆ. ಆದರೆ ದುರದೃಷ್ಟವಶಾತ್‌ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಏಕಾಏಕಿ ನೀರು ಏರಿಕೆಯಾಗಿದೆ. ಹೀಗಾಗಿ ಕುಟುಂಬದ ಏಳೂ ಮಂದಿ ಕೊಚ್ಚಿ ಹೋಗಿದ್ದಾರೆ. ಸಾಕಷ್ಟು ಹೊತ್ತು ನೀರಿನ ನಡುವೆ ನಿಂತಿದ್ದರೂ ದಡಕ್ಕೆ ಬರಲು ಸಾಧ್ಯವಾಗಲಿಲ್ಲ. ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಮೂವರು ಸಾವನ್ನಪ್ಪಿದ್ದು, ಅವರ ಶವ ಪತ್ತೆಯಾಗಿದೆ. ಇನ್ನಿಬ್ಬರ ಶವ ಪತ್ತೆಯಾಗಿಲ್ಲ. ಪತ್ತೆ ಕಾರ್ಯಾಚರಣೆ ಸೋಮವಾರವೂ ಮುಂದುವರಿದಿದೆ.


ಘಟನೆಯ ವೇಳೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿದ್ದರೂ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಕುರಿತ ವೀಡಿಯೊವೊಂದು ವೈರಲ್‌ ಆಗಿದೆ. ಈ ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ…

Saurabh Koratkar on X: “Whole video and background of tragic incident This incident occurred in Lonavala where an entire family lost their lives during a monsoon trip. Five people were swept into the Bhushi Dam from a waterfall’s flow behind it. The bodies of Three have been found, while the search for https://t.co/fFlUIvIxvQ” / X

RELATED ARTICLES
- Advertisment -
Google search engine

Most Popular