spot_img
23.6 C
Udupi
Tuesday, March 28, 2023
spot_img
spot_img
spot_img

ಸೊಸೆಯನ್ನೇ ಮದುವೆಯಾದ 70 ವರ್ಷದ ಮುದುಕ : ವೈರಲ್ ಆದ ಮದುವೆ ಪೋಟೋಸ್


ನ್ಯೂಸ್ ನಾಟೌಟ್ : ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ಸಂಬಂಧದ ಅರಿವಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ೭೦ ವಯಸ್ಸಿನ ಮುದುಕ ೨೮ ವಯಸ್ಸಿನ ತನ್ನ ಸೊಸೆಯನ್ನೆ ಮದುವೆಯಾದ ಘಟನೆ ಕೊಟ್ಟಾಲಿ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ನಡೆದಿದೆ.
೭೦ ವರ್ಷದ ಕೈಲಾಸ್ ಯಾದವ್ ತನ್ನ ಮಗನ ಹೆಂಡತಿಯನ್ನೆ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಈ ಮಾವ – ಸೊಸೆ ಮದುವೆಯ ಪೋಟೊ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ. ಇದೀಗ ಮುದುಕನ ಮನೆಯಲ್ಲಿ ಸೊಸೆ ಪೂಜಾ ನೆಮ್ಮದಿಯ ಜೀವನ ನಡೆಸುತಿದ್ದಾರೆ ಎನ್ನಲಾಗಿದೆ.
ಪೊಲೀಸ್ ಠಾಣೆಯಲ್ಲಿ ವಾಚ್ ಮಾನ್ ಆಗಿ ಕೆಲಸ ಮಾಡುತ್ತಿದ್ದ ಕೈಲಾಶ್ ಯಾದವ್ ಅವರ ಹೆಂಡತಿ ೧೨ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಕೈಲಾಶ್ ಅವರ ನಾಲ್ಕು ಮಕ್ಕಳಲ್ಲಿ ಮೂರನೇ ಮಗ ಅಂದರೆ ಸೂಸೆ ಪೂಜಾ ಅವರ ಪತಿ ಕೂಡ ನಿಧನರಾಗಿದ್ದರು. ಸೊಸೆ ಪೂಜಾ ನಂತರ ಬೇರೆ ಮದುವೆ ಅಗುತ್ತಾರೆ ಅದರೆ ಅದು ಇಷ್ಟವಾಗದ ಕಾರಣ ಮತ್ತೆ ಹಿಂದಿನ ಗಂಡನ ಮನೆಗೆ ಮರಳುತ್ತಾರೆ.
ಈ ವೇಳೆ ಮಾವನಿಗೆ ತನ್ನ ಸೊಸೆ ಮೇಲೆ ಅನುರಾಗ ಹುಟ್ಟಿದೆ. ಅ ನಂತರ ಇಬ್ಬರು ಪ್ರೀತಿಸಿ ಎಲ್ಲರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದಾರೆ. ವಯಸ್ಸು ಹಾಗೂ ಸಂಬಂಧವನ್ನು ಲೆಕ್ಕಿಸದೆ ಮದುವೆ ಅಗಿರುವ ಮಾವ – ಸೊಸೆಯ ಪೋಟೊ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

Related Articles

Stay Connected

0FansLike
3,752FollowersFollow
0SubscribersSubscribe
- Advertisement -

Latest Articles