ಬೆಂಗಳೂರು : ರಾಜ್ಯದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬೆಳಗ್ಗೆ 9 ಗಂಟೆಯ ವೇಳೆಗೆ ಕರ್ನಾಟಕದಲ್ಲಿ 9.21% ಮತದಾನ ನಡೆದಿದೆ. ಈ ಪೈಕಿ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು 14.33% ದಾಖಲಾದರೆ ಚಾಮರಾಜನಗರ ಮತ್ತು ಮಂಡ್ಯದಲ್ಲಿ 7.70% ಮತದಾನ ದಾಖಲಾಗಿದೆ. ರಾಜ್ಯದ ಕೆಲವೆಡೆ ಎವಿಎಂ ದೋಷದಿಂದಾಗಿ ಕೆಲ ಸಮಸ್ಯೆಯಾಗಿತ್ತು. ನಂತರ ಇವಿಎಂ ದೋಷವನ್ನು ಸರಿಪಡಿಸಿದ್ದು, ಈಗ ಮತದಾನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಉತ್ತಮ ಪತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಗ್ಗೆ ಹಲವು ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.