ಆರದಿರಲಿ ಬದುಕು ಆರಾಧನ ತಂಡದ ಡಿಸೆಂಬರ್ ತಿಂಗಳ 93 ನೇ ಯೋಜನೆ ಯ ಸಹಾಯ ಧನ ವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲ್ ಕೊಡಂಗೆ ನಿವಾಸಿ ಆದ ಅಶೋಕ್ ಅವರು ಡಯಬೀಟಿಸ್ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಕಾಲನ್ನು ಕತ್ತರಿಸಲಾಗಿದ್ದು ಈಗಾಗಲೇ ಎರಡು ಮೂರು ಲಕ್ಷ ಹಣ ಖರ್ಚಾಗಿದ್ದು ಅವರು ಕಡು ಬಡವರಾಗಿದ್ದು ಅವರ ಕಷ್ಟ ಅರಿತ ನಮ್ಮ ತಂಡ ಇವರ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ, ಗಣೇಶ್ ಪೈ . ದೀನ್ ರಾಜ್ ಕೆ. ಬಸವರಾಜ್ ಮಂತ್ರಿ, ಡಾ.ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ, ನಿಲೇಶ್ ಕಟೀಲು. ಪ್ರವೀಣ್ ಬಂಗೇರ, ಶ್ರೀಕಾಂತ ಭಟ್ ಪೊನ್ನ ಗಿರಿ, ಪ್ರಭಾಕರ ಮಂಗಳೂರು, ದಯಾನಂದ ಮಡ್ಕೇಕರ್, ಬೀಮಯ್ಯ ಸುಳ್ಯ, ಅಗರಿ ರಾಘವೇಂದ್ರ ಸರ್, ಭಾಸ್ಕರ ದೇವಸ್ಯ, ದಿನೇಶ್ ಸಿದ್ದಕಟ್ಟೆ, ಉಪಸ್ಥಿತರಿದ್ದರು.
ಆರದಿರಲಿ ಬದುಕು ಆರಾಧನ ತಂಡದ ಡಿಸೆಂಬರ್ ತಿಂಗಳ 93ನೇ ಯೋಜನೆಯ ಸಹಾಯ ಧನ
RELATED ARTICLES