Saturday, October 5, 2024
Homeತುಳು ಭಾಷೆತುಳು ಅಧಿಕೃತ ರಾಜ್ಯಭಾಷೆಗೆ 95% ಕೆಲಸ ಮುಗಿಯಿತು : ವೇದವ್ಯಾಸ ಕಾಮತ್

ತುಳು ಅಧಿಕೃತ ರಾಜ್ಯಭಾಷೆಗೆ 95% ಕೆಲಸ ಮುಗಿಯಿತು : ವೇದವ್ಯಾಸ ಕಾಮತ್

ಮಂಗಳೂರು: ತುಳು ಭಾಷೆಗೆ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ಸಿಗಬೇಕು ಎಂದು ತುಳು ಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಮಾಜಿ ಶಾಸಕ ಮೊಯ್ದೀನ್ ಬಾವಾ ಇವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ ಬೇಧ ಮರೆತು ಎಲ್ಲರೂ ಒಂದಾಗಿ ಭಾಗವಹಿಸಿದರು. ತುಳುಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಡ ಹಾಕಬೇಕು, ನಂತರ ಸರಕಾರದಿಂದ ಪ್ರತಿಕ್ರೀಯೆ ಸಿಗದಿದ್ದಲಿ ಹೋರಾಟ, ಉಪವಾಸ ಸತ್ಯಾಗ್ರಹ ಮಾಡಬೇಕು ಎಂದು ತೀರ್ಮಾನ ಮಾಡಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬೇರೆ ರಾಜ್ಯಗಳು ಒಂದಕ್ಕಿಂತ ಒಂದು ಹೆಚ್ಚು ಭಾಷೆಯನ್ನು ಯಾವ ರೀತಿ ಅಧಿಕೃತ ಭಾಷೆಯಾಗಿ ಮಾಡಿದರು ಎನ್ನುವ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರ ಇಗಾಗಲೇ ಪಡೆದಿದೆ. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮ್ಮುಖದಲ್ಲಿ ಕ್ಯಾಬಿನೆಟ್ ನಲ್ಲಿ ಆದೇಶ ಮಾಡಲು ಮಾತ್ರ ಬಾಕಿಯಾಗಿದೆ. 95% ಕೆಲಸ ಸಂಪೂರ್ಣ ಆಗಿದೆ. 5% ಕೆಲಸ ಮಾತ್ರ ಬಾಕಿ ಆಗಿದೆ. ಆದಷ್ಟು ಬೇಗ ನಮ್ಮ ಬೇಡಿಕೆ ಪೂರೈಸಬೇಕಾಗಿ ನಮ್ಮ ಆಶಯ ಎಂದರು.

ಮಾಜಿ ಶಾಸಕ ಮೊಯ್ದೀನ್ ಬಾವಾ ಮಾತನಾಡಿ, ತುಳುವಿಗೆ ಅಧಿಕೃತ ಸ್ಥಾನಮಾನ ಸಿಕ್ಕಿದರೆ ಪರವೂರಿನಿಂದ ಬಂದ ಕಂಪೆನಿಗಳಲ್ಲಿ ಊರಿನ ಜನರಿಗೆ ಕೆಲಸ ಸಿಗುತ್ತದೆ, ಉಡುಪಿ ದ.ಕ ಜಿಲ್ಲೆಯ ಸಂಸತ್ ಸದಸ್ಯ ಸ್ಥಾನಕ್ಕೆ ನಿಲ್ಲುವ ಅಭ್ಯರ್ಥಿಗಳಿಗೆ ತುಳು ಭಾಷೆ ಅಧಿಕೃತ ಮಾಡುವ ಬಗ್ಗೆ ತನ್ನ ವೋಟಿನ ಪ್ರಣಾಳಿಕೆಯನ್ನು ಘೋಷಣೆ ಮಾಡಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular