ಗದಗ : ಹತ್ತಾರು ಕನಸು ಕಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡದ ಬಣಗಾರ ಕಾಲೋನಿಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕರ ಕಿರುಕುಳಕ್ಕೆ 9ನೇ ತರಗಿತಿ ಖುಷಿ ಪ್ರಾಣ ಕಳೆದುಕೊಂಡಿದ್ದಾಳೆ. ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಬೇಸತ್ತು ಖುಷಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮುದ್ದಿನ ಮಗಳ ಸಾವು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಬಣಕಾರ ಓಣಿಯ ನಿವಾಸಿ 15 ವರ್ಷದ ಖುಷಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಓದುತ್ತಿದ್ದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ದಿನ ನಿತ್ಯ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರೆಂದು ಖುಷಿಯ ಹೆತ್ತವರು ಆರೋಪಿಸಿದ್ದು, ಮುದ್ದಾಗಿ ಸಾಕಿದ್ದ ಮಗಳ ಕಳೆದುಕೊಂಡ ಕುಟುಂಬಸ್ಥರು ಮಗಳ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ..
ಲವ್ ಜಿಹಾದ್ ಆರೋಪ..!
ಇಬ್ಬರು ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಖುಷಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಎಸ್ ಎಸ್ ಕೆ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿ ಸಾವು ಖಂಡಿಸಿ ಇಡೀ ಸಮಾಜ ವ್ಯಾಪಾರ ವಹಿವಾಟು ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖುಷಿ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲವ್ ಜಿಹಾದ್ಗೆ ಬಲಿಯಾಗಿರುವ ಸಂಶಯವಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಹಶೀಲ್ದಾರರಿಗೆ ಆಗ್ರಹಿಸಿದ್ದಾರೆ. ಇನ್ನು ಈ ಕುರಿತು ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.