ಹಿಂದು ಸಂಘಟನೆ ಕರೆ ನೀಡಿದ ಬಂದ್ ಗೆ ಮೂಡುಬಿದಿರೆ ಸ್ಥಬ್ಧ: ವಾರದ ಸಂತೆಯೂ ಇಲ್ಲ..!

0
875

ಮೂಡಬಿದಿರೆ : ಹಿಂದೂ ಕಾರ್ಯಕರ್ತ, ಬಜ್ಪೆ ಸುಹಾಸ್ ಶೆಟ್ಟಿಯ ಕೊಲೆಯನ್ನು ಖಂಡಿಸಿ ನಡೆದ ಜಿಲ್ಲಾ ಬಂದ್ ಕರೆಗೆ ಸ್ಪಂದಿಸಿ ಮೂಡುಬಿದಿರೆಯಲ್ಲೂ ಅಂಗಡಿ ಬಂದ್ ನಡೆಸಿರುವುದಲ್ಲದೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ.


ಕೊಲೆಯನ್ನು ಖಂಡಿಸಿರುವ ಹಿಂದೂ ಸಂಘಟನೆಗಳ ಕಾಯ೯ಕತ೯ರು ರಸ್ತೆ ಮಧ್ಯೆ ಟಯರ್ ಸುಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಾರದ ಸಂತೆಯೂ ಇಲ್ಲ : ಮೂಡುಬಿದಿರೆಯಲ್ಲಿ ವಾರದ ಸಂತೆ ಶುಕ್ರವಾರವಾಗಿರುವುದರಿಂದ ಹೊರ ಜಿಲ್ಲೆಯವರು ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ವ್ಯಾಪಾರ ಮಾಡಲು ಬೆಳಿಗ್ಗೆ ಬೇಗನೇ ಮಾಕೆ೯ಟ್ ಗೆ ಜಮಾಯಿಸಿದ್ದರು ಆದರೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂತಿರುಗಿದ್ದಾರೆ ಆದ್ದರಿಂದ ವಾರದ ಸಂತೆ ಇಲ್ಲದೆ ಮಾಕೆ೯ಟ್ ಬಿಕೋ ಎನ್ನುತಿದೆ. ಬಸ್ಸ್ ನಿಲ್ದಾಣದಲ್ಲಿ ನಿಶಬ್ದ. ದಿನವಿಡಿ ಜನರಿಂದ ತುಂಬಿ ಕೊಳ್ಳುವ ಮೂಡಬಿದಿರೆ ಬಸ್ಸ್ ನಿಲ್ದಾಣ ಯಾರೋ ಇಲ್ಲದೆ ಬಿಕೋ ಎನ್ನುತಿತ್ತು.

LEAVE A REPLY

Please enter your comment!
Please enter your name here