ಭಾರತದ ವಿಜಯಕ್ಕಾಗಿ ಗೋವಾದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ ದಲ್ಲಿ ಶಕ್ತಿಶಾಲಿ ‘ಶತಚಂಡಿ ಯಜ್ಞ’ ! – ಸನಾತನ ಸಂಸ್ಥೆ

0
118


ಸದ್ಯದ ಸ್ಥಿತಿಯಲ್ಲಿ ಭಾರತ ಪಾಕಿಸ್ತಾನ ಯುದ್ಧದ ಕದನ ವಿರಾಮ ಘೋಷಣೆ ಆಗಿದ್ದರೂ ದುಷ್ಟ ಪಾಕಿಸ್ತಾನ ಈ ಮಧ್ಯ ಅನೇಕ ಬಾರಿ ಅದನ್ನು ಉಲ್ಲಂಘಿಸಿರುವುದು ನಾವು ನೋಡಿದ್ದೇವೆ. ಹಾಗಾಗಿ ಈ ಕದನಗಳಲ್ಲಿ ಭಾರತಕ್ಕೆ ವಿಜಯ ದೊರೆಯಬೇಕೆಂದು ಸನಾತನ ಸಂಸ್ಥೆಯ ವತಿಯಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮೇ 20 ರಿಂದ 22 2025 ಈ ಮೂರು ದಿನದ ಕಾಲಾವಧಿಯಲ್ಲಿ 25 ಪುರೋಹಿತರ ಉಸ್ತುವಾರಿಯಲ್ಲಿ ಶಕ್ತಿಶಾಲಿ ಶತಚಂಡಿ ಯಜ್ಞ ಮಾಡಲಾಗುವುದು. ಈ ಯಜ್ಞ ಎಲ್ಲಾ ನಾಗರಿಕರಿಗಾಗಿ ಮುಕ್ತವಾಗಿದ್ದು ಇದರಲ್ಲಿ ದೇಶವಿದೇಶದವರೂ ಪಾಲ್ಗೊಳ್ಳುವರು, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾಹಿತಿ ನೀಡಿದರು.

ಫರ್ಮಾಗುಡಿ, ಫೊಂಡಾ ಗೋವಾದಲ್ಲಿನ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಮೇ 17 ರಿಂದ 19. 2025 ಈ ಕಾಲಾವಧಿಯಲ್ಲಿ ಸನಾತನ ರಾಷ್ಟ್ರದ ಶಂಖನಾದ ಮಹೋತ್ಸವದ ನಡೆಯುತ್ತಿದೆ. ಇದಕ್ಕಾಗಿ 23 ದೇಶಗಳಲ್ಲಿನ ಪ್ರತಿಷ್ಠಿತ ಗಣ್ಯರು, ವಿವಿಧ ಸಂಪ್ರದಾಯದ ಸಂತ – ಮಹಂತರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ದೇವಸ್ಥಾನದ ಟ್ರಸ್ಟಿಗಳು ಮತ್ತು 25 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು, ಹಿಂದೂ ಧರ್ಮಪ್ರೇಮಿಗಳು ಭಾಗವಹಿಸುವರು. ಯಜ್ಞದಲ್ಲಿ ಸಹಭಾಗಿ ಆಗುವ ಜನರು ಭಾರತದ ವಿಜಯಕ್ಕಾಗಿ ಪ್ರಾರ್ಥನೆ ಮಾಡುವರು. ದೇವಭೂಮಿ, ತಪೋಭೂಮಿ, ಅವತಾರ ಭೂಮಿ ಮತ್ತು ಪೃಥ್ವಿಯಲ್ಲಿನ ಏಕೈಕ ಸನಾತನ ರಾಷ್ಟ್ರವಾದ ಭಾರತದ ರಕ್ಷಣೆಗಾಗಿ ಮತ್ತು ವಿಜಯಕ್ಕಾಗಿ ನಡೆಯುವ ಶತಚಂಡಿ ಯಜ್ಞದಲ್ಲಿ ಸಪ್ತಶತೀಯ ಸಾಮೂಹಿಕ ಪಾರಾಯಣ, ಯಜ್ಞ ವಿಧಿ, ಆಹುತಿ ಮತ್ತು ಪೂರ್ಣಾಹುತಿ ಮುಂತಾದರಂತೆ ನಡೆಯುವುದು. ಮೇ 20 ರಂದು ಮಧ್ಯಾಹ್ನ 4 ರಿಂದ ರಾತ್ರಿ 8 , ಮೇ 21 ರಂದು ಬೆಳಿಗ್ಗೆ 9.30 ಇಂದ ಮಧ್ಯಾಹ್ನ 12.30 ವರೆಗೆ ಮತ್ತು ಮಧ್ಯಾಹ್ನ 4 ರಿಂದ ರಾತ್ರಿ 8 ವರೆಗೆ, ಮೇ 22 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಈ ಸಮಯದಲ್ಲಿ ಶತಚಂಡಿ  ಯಜ್ಞ ನಡೆಯುವುದು.

ಈ ಯಜ್ಞದ ಮೊದಲು ಮೇ 17 ರಿಂದ 19.2025 ಈ ಕಾಲಾವಧಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ರಾಷ್ಟ್ರಧರ್ಮ ಮತ್ತು ಹಿಂದೂ ಸಮಾಜ ರಕ್ಷಣೆಗೆ ಸಂಬಂಧಿಸಿದ ಮಹತ್ವಪೂರ್ಣ ಗಣ್ಯರ ವಿಚಾರ ಮಂಥನ, ಸಂತ ಸಭೆ ಮತ್ತು ಇತರ ಜಾಗೃತಿಪರ ಕಾರ್ಯಕ್ರಮಗಳು ನಡೆಯುವುದು. ಈ ಮಹೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು  SanatanRashtraShankhnad.in ಈ ಜಾಲತಾಣಕ್ಕೆ ಭೇಟಿ ನೀಡಿ .

LEAVE A REPLY

Please enter your comment!
Please enter your name here