ಶ್ರೀ ರವಿಶಂಕರ್ ವಿದ್ಯಾಮಂದಿರ ವಿದ್ಯಾರ್ಥಿ ಪರಿಷತ್: ಪ್ರತಿಜ್ಞಾ ಸ್ವೀಕಾರ ಸಮಾರಂಭ

0
65

ಕಾರ್ಕಳ : ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ವಿದ್ಯಾರ್ಥಿ ಪರಿಷತ್ ಪ್ರತಿಜ್ಞಾ ಸ್ವೀಕಾರ ಸಮಾರಂಭವು ಜು. ೧೯ರಂದು, ದೀಪ ಬೆಳಗಿ ವಿಜೃಂಭಿತವಾಗಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಸಿದ್ಧ ಲೆಕ್ಕಪತ್ರ ಪರಿಶೀಲಕ C.A. ಕಮಲಾಕ್ಷ ಕಾಮತ್ ಅವರು, ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು . “ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು, ಕೊಟ್ಟದ್ದು ತನಗೆ – ಬಚ್ಚಿಟ್ಟಿದ್ದು ಪರರಿಗೆ” ಎಂಬ ನುಡಿಮುತ್ತುಗಳೊಂದಿಗೆ ದಾನದ ಮಹತ್ವವನ್ನು ವಿವರಿಸಿದರು.

“ರಾಮನ ನಡೆ, ಕೃಷ್ಣನ ನುಡಿ” ಎಂಬ ಸ್ಫೂರ್ತಿದಾಯಕ ಮಾತುಗಳ ಮೂಲಕ ಅವರು ಜೀವನ ಮೌಲ್ಯಗಳ ಮಹತ್ವವನ್ನೂ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಮಂಡಳಿಯ ಕೋಶಾಧಿಕಾರಿಯಾದ ಶ್ರೀಯುತ ದಿನೇಶ್ ಕಾಮತ್ ರವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭ ಹಾರೈಸಿದರು.
ಶಾಲಾ ಪ್ರಾಂಶುಪಾಲರಾದ ಸೋನಲ್ ಆರ್ ಕಾಮತ್ ರವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿ , ನಾಯಕರಿಗೆ ನಾಯಕತ್ವದ ಗುಣ ಅವಶ್ಯಕ ಎಂದು ಹೇಳಿ, ಭಾಗವಹಿಸಿದ ಹಾಗೂ ಪ್ರತಿನಿಧಿಗಳಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ   ಶುಭ ಹಾರೈಸಿದರು.

LEAVE A REPLY

Please enter your comment!
Please enter your name here