Thursday, September 12, 2024
Homeರಾಜ್ಯಏ. 11 ರಿಂದ 17 :ಚಾಮರ ಫೌಂಡೇಶನ್ (ರಿ.) ಉಚಿತ ಬೇಸಿಗೆ ಶಿಬಿರ

ಏ. 11 ರಿಂದ 17 :ಚಾಮರ ಫೌಂಡೇಶನ್ (ರಿ.) ಉಚಿತ ಬೇಸಿಗೆ ಶಿಬಿರ

ಚಾಮರ ಫೌಂಡೇಶನ್(ರಿ.) ದಿ.ಯತೀಶ್ ವೈ ಶೆಟ್ಟಿ ನೆನಪಿನಲ್ಲಿ ನಡೆಸುವ ಏಳು ದಿನಗಳ ಉಚಿತ ಬೇಸಿಗೆ ಶಿಬಿರ ಬೇಸಿಗೆಗೊಂದು ಚಾಮರ 2024 ಮಂಗಳೂರಿನ ಕೆಮ್ರಾಲ್ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಸುಮಾರು 100 ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಶಿಬಿರ ಸ್ಥಳೀಯ ವಿನಾಯಕ ಮಿತ್ರ ಮಂಡಳಿ ಹಾಗೂ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ಇವರ ಸಹಭಾಗಿತ್ವದಲ್ಲಿ ನಡೆಯಲಿದೆ.

ಈ ಬೇಸಿಗೆ ಶಿಬಿರವನ್ನು ವಿಶೇಷವಾಗಿ ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ಇಂತಹ ಶಿಬಿರದಿಂದ ವಂಚಿತರಾಗುವ ಮಕ್ಕಳಿಗಾಗಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಹಾಗೂ ಮಕ್ಕಳ್ಳಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆ ಹೀಗೆ ಹಲವಾರು ಸದುದ್ಧೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಚಾಮರ ಫೌಂಡೇಶನ್ 05 ವರ್ಷಗಳಿಂದ ಇಂತಹ ಬೇಸಿಗೆ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಿದೆ. ಮುಂದಿನ 7 ದಿನದಲ್ಲಿ ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ಸನಿಹಾ ಪುಜಾರಿ, ಡೊಲ್ವಿನ್ ಕೊಳಲಗಿರಿ, ಕರಣ್ ಆಚಾರ್ಯ,ಸೊಂದಾ ಭಾಸ್ಕರ ಭಟ್, ಜಯಶ್ರೀ ಶರ್ಮ, ತ್ರಿಷಾ ಶೆಟ್ಟಿ, ದರ್ಪಣ ಮುಂತಾದ ಮಂಗಳೂರು ಮತ್ತು ಉಡುಪಿಯ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಯೋಗ, ಮೈಮ್, ಕೋಲಾಜ್, ಬಾಟಲ್ ಆರ್ಟ್, ವರ್ಲಿ ಆರ್ಟ್ ಮುಂತಾದ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುವುದು. ಶಿಬಿರದ ಸಮಾರೋಪ ಸಮಾರಂಭವು 2024 ರ ಏಪ್ರಿಲ್ 17, ಬುಧವಾರ 11 : 30 ಬೆಳಿಗ್ಗೆ ನಡೆಯಲಿರುವುದು.

RELATED ARTICLES
- Advertisment -
Google search engine

Most Popular