Wednesday, October 9, 2024
Homeಧಾರ್ಮಿಕಎ.14: ಅಷ್ಟಪವಿತ್ರ ನಾಗಮಂಡಲೋತ್ಸವ

ಎ.14: ಅಷ್ಟಪವಿತ್ರ ನಾಗಮಂಡಲೋತ್ಸವ

ಉಡುಪಿ : ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ (ರಿ.) ವತಿಯಿಂದ 14.04.2024 ರ ರವಿವಾರ ಅಷ್ಟಪವಿತ್ರ ನಾಗಮಂಡಲೋತ್ಸವವು ನಡೆಯಲಿದೆ. ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ , ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಹಾಗೂ ರಾತ್ರಿ ಹಾಲಿಟ್ಟು ಸೇವೆ, ಮಂಡಲೋತ್ಸವ ಸೇವೆ ನಡೆಯಲಿದೆ.

ಬೆಳಿಗ್ಗೆ 11.30 ರಿಂದ 12.30 ರ ತನಕ ಸುಗಮ ಸಂಗೀತ ಭಕ್ತಿ ಗಾಯನ, ಮಧ್ಯಾಹ್ನ 12.30 ರಿಂದ 2.30 ರ ತನಕ ಗಾನ ವೈಭವ ಮತ್ತು ಭಕ್ತಿ ಲಹರಿ, 2.30 ರಿಂದ 5.30 ತನಕ ಶ್ರೀ ದೇವಿ ವೈಭವ ಮತ್ತು ಬಿಡುವನೆ ಬ್ರಹ್ಮ ಲಿಂಗ ನೃತ್ಯ ರೂಪಕ ಮತ್ತು ದಕ್ಷಯಜ್ಞ ರಾಮಾಯಣ ದರ್ಶನಂ ದಾಸ ಕೀರ್ತನೆಗಳು – ನೃತ್ಯ ವೈಭವ ನಡೆಯಲಿದೆ. ಮತ್ತು ಸಂಜೆ ಗಂಟೆ 5.00 ರಿಂದ ಧಾರ್ಮಿಕ ಸಭಾಕಾರ್ಯಕ್ರಮಗಳು ನಡೆಯಲಿದೆ.

RELATED ARTICLES
- Advertisment -
Google search engine

Most Popular