Monday, July 15, 2024
Homeಅಪಘಾತಕಾರಿಗೆ ಬೆಂಕಿ ಹೊತ್ತಿಕೊಂಡು 14 ವರ್ಷದ ಬಾಲಕಿ ಸಜೀವ ದಹನ

ಕಾರಿಗೆ ಬೆಂಕಿ ಹೊತ್ತಿಕೊಂಡು 14 ವರ್ಷದ ಬಾಲಕಿ ಸಜೀವ ದಹನ

ಬೆಂಗಳೂರು: ಮಾದನಾಯಕನಹಳ್ಳಿ ಬಳಿ ಓಮ್ನಿ ಕಾರು ಅಪಘಾತವಾಗಿ ಕಾಣಿಸಿಕೊಂಡು ಬೆಂಕಿಯಲ್ಲಿ ಬಾಲಕಿಯೊಬ್ಬಳು ಸಜೀವ ದಹನವಾದ ದಾರುಣ ಘಟನೆ ನಡೆದಿದೆ.

ಅಪಘಾತಕ್ಕೀಡಾದ ಬಳಿಕ ಓಮ್ನಿ ಕಾರು ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ಬಾಲಕಿ ರಕ್ಷಣೆಗೆ ಮೊರೆಯಿಡುತ್ತಾ ಸಜೀವ ದಹನವಾಗಿದ್ದಾಳೆ.

14 ವರ್ಷದ ದಿವ್ಯಾ ಮೃತ ಬಾಲಕಿ. ಒಟ್ಟು 8 ಜನ ಕಾರಿನಲ್ಲಿದ್ದು, ಅಬ್ಬಿಗೆರೆಯಿಂದ ದಾಸನಪುರಕ್ಕೆ ವಾಪಾಸ್ ಆಗುತ್ತಿದ್ರು. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.

ಘಟನೆಯಲ್ಲಿ ಸುನಿತಾ (20), ಮಂಜುಳ (65), ಮಯಾಂಕ್ (16) ಮತ್ತು ನಮನ್ (17) ಎಂಬುವರು ಗಾಯಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular