ತಮಿಳುನಾಡು: ಇಲ್ಲಿನ ರಾಣಿಪೇಟೆಯ ಶಾಲೆಯೊಂದರಲ್ಲಿ 14ರ ವಿದ್ಯಾರ್ಥಿನಿ ಪ್ರಜ್ಞೆತಪ್ಪಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಸ್ಥಳೀಯ ನಿವಾಸಿ ಅದ್ವಿತಾ(14) ಮೃತೆ. ಚೆನ್ನೈ- ಬೆಂಗಳೂರು(ಎನ್ಎಚ್-44) ಹೆದ್ದಾರಿಯ ಸಮೀಪ ಇರುವ ಶಾಲೆಯಲ್ಲಿ ಬೆಳಗ್ಗೆ 11.30ಕ್ಕೆ ಘಟನೆ ಸಂಭವಿಸಿದೆ. ತರಗತಿಯಲ್ಲಿ ಹಾಜರಾಗಿದ್ದ ಅದ್ವಿತಾ ಇದ್ದಕ್ಕಿಂದಂತೆ ಪ್ರಜ್ಞೆ ತಪ್ಪಿ ಸ್ನೇಹಿತೆಯ ಭುಜದ ಮೇಲೆ ಸಲ್ಪ ಹೊತ್ತು ಮಲಗಿದ್ದಾರೆ. ಬಳಿಕ ನೆಲಕ್ಕೆ ಹೊರಗಿದ್ದಾರೆ. ಇದನ್ನು ಗಮನಿಸಿದ ಕ್ಲಾಸ್ ವಿದ್ಯಾರ್ಥಿಗಳು ಶಿಕ್ಷಕರಿಗೆ ಘಟನೆಯ ಮಾಹಿತಿ ನೀಡಿದ್ದಾರೆ.
ಶಿಕ್ಷಕರು ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಆದರೆ,ಅಲ್ಲಿಂದ ವೈದ್ಯರು ಅದ್ವಿತಾ ಮೃತ ಪಟ್ಟಿದ್ದಾರೆ ಎಂದು ಹೇಳಿದ್ದಾರೆ. ನಂತರ ಕಾವೇರಿಪಾಕ್ಕಂ ಪೊಲೀಸರು ದೇಹವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಮರೋಣತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ವಿಚಾರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಲೆಯಲ್ಲಿ ಸಂಭವಿಸಿದ ಸಂಪೂರ್ಣ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದೆ. ವೆಲ್ಲೂರು ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಮತ್ತು ವೈದ್ಯರಾದ ಡಾ.ಕೆ. ವಸಂತಕುಮಾರ್ ಅವರ ಪುತ್ರಿ ಅದ್ವಿತಾ. ವಿದ್ಯಾರ್ಥಿನಿ ಈ ಮುಂಚೆ ಹೃದಯ ಸಂಬಂಧಿ ಕಾಯಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.