ಒಮಾನ್ ಬಿಲ್ಲವಾಸ್ ಕೂಟದ 15 ನೇ ವರ್ಷದ ವಾರ್ಷಿಕೋತ್ಸವವ 19-4-2024 ರಂದು ಶುಕ್ರವಾರ ಮಸ್ಕತ್ ನ ರೂವಿ ಅಲ್ ಫಲಾಜ್ ಹೋಟೆಲ್ ನ ಗ್ರ್ಯಾಂಡ್ ಹಾಲ್ ನಲ್ಲಿ ಒಮಾನ್ ಬಿಲ್ಲವಾಸ್ ಕೂಟದ 15ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಭ್ರಮಾಚರಣೆಯ ಪ್ರಯುಕ್ತ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:30 ರ ವರೆಗೆ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಊರಿನ ಪರವೂರಿನ ಅತಿಥಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಲಿದೆ. ಅದೇ ದಿನ ಮಧ್ಯಾಹ್ನ 3:00ರಿಂದ ತೆಂಕುತಿಟ್ಟಿನ ಪರಿಪೂರ್ಣ ಮೇಳವದು ವಿದೇಶದಲ್ಲಿ ಪ್ರಪ್ರಥಮ ಬಾರಿಗೆ ಯಕ್ಷಗಾನ ಗೆಜ್ಜೆ ಸೇವೆಯು ಶ್ರೀ ಗೆಜ್ಜೆಗಿರಿ ಮೇಳದವರಿಂದ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಾರಣಿಕವನ್ನು ಸಾರುವ, ನವರಸ ಭರಿತ ತುಳು ಯಕ್ಷಗಾನ ಪ್ರಸಂಗ ” ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಯಶಸ್ವಿ 225ನೇ ಪ್ರಯೋಗದ ಪ್ರದರ್ಶನದೊಂದಿಗೆ ಅತೀ ವಿಜೃಂಭಣೆಯಿಂದ ನಡೆಯಲಿದೆ.