ಮೈರೋಳ್ತಡ್ಕ : ಬoದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನ ದಲ್ಲಿ ಏಪ್ರಿಲ್ 02 ರಿಂದ ಏಪ್ರಿಲ್ 10 ರ ವರೆಗೆ ನಡೆಯುವ ಶ್ರೀ ಸದಾಶಿವ ದೇವರ ಪ್ರತಿಷ್ಟಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.
ಆ ಪ್ರಯುಕ್ತ ಏಪ್ರಿಲ್ 01 ರಂದು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮೈರೋಳ್ತಡ್ಕ ಒಕ್ಕೂಟ ಹಾಗೂ ಊರ ಭಕ್ತಾಭಿಮಾನಿಗಳಿಂದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಸಲಾಯಿತು.