Thursday, July 25, 2024
Homeಧಾರ್ಮಿಕಏ.2-5: ಶ್ರೀ ಕ್ಷೇತ್ರ ಬನ್ನಡ್ಕ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ

ಏ.2-5: ಶ್ರೀ ಕ್ಷೇತ್ರ ಬನ್ನಡ್ಕ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ

ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಏ.2 ರಿಂದ ಏ.5 ರವರೆಗೆ ನಡೆಯಲಿದೆ.

ದಿನಾಂಕ 2-4-2024 ರಂದು ತೋರಣ ಹಾಗೂ ಉಗ್ರಾಣ ಮುಹೂರ್ತ ಹೊರೆಕಾಣಿಕೆ ಮೆರವಣಿಗೆಯು ಅಲಂಗಾರು ದೇವಸ್ಥಾನದಿಂದ ಶ್ರೀ ಕ್ಷೇತ್ರ ಬನ್ನಡ್ಕಕ್ಕೆ ಬರಲಿದೆ.
ದಿನಾಂಕ 3-4-2024 ರಂದು ಭಂಡಾರ ಆಗಮನ.
ದಿನಾಂಕ 4-4-2024 ಬ್ರಹ್ಮಕಲಶ ಹಾಗೂ ವರ್ಷಾವಧಿ ನೇಮೋತ್ಸವ ನಡೆಯಲಿದೆ.

ಶ್ರೀ ಕ್ಷೇತ್ರ ಬನ್ನಡ್ಕ ಎಂಬ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಮೂಡುಬಿದಿರೆ ಸಮೀಪದ ಪಡುಮಾರ್ನಾಡು ಗ್ರಾಮದಲ್ಲಿ ಬೆಳಗುತ್ತಿದೆ. ಈ ಕ್ಷೇತ್ರವು ‘ಜೈನಕಾಶಿ’ ಎಂಬ ಖ್ಯಾತ ನಾಮಧೇಯ ಪಡೆದು 18 ಬಸದಿಗಳಿಂದ ಮೆರೆಯುತ್ತಿರುವ ಮೂಡುಬಿದಿರೆ ಪಟ್ಟಣದಿಂದ 4 ಕಿ.ಮೀ ಉತ್ತರದಲ್ಲಿದೆ.

ಶ್ರೀ ಕ್ಷೇತ್ರ ಬನ್ನಡ್ಕ ವು 200ಮೀ ಉದ್ದ 100ಮೀ ಅಗಲ ವಿಸ್ತಾರವಾದ ಸಮತಟ್ಟಾದ ಮೈದಾನ ಪ್ರದೇಶದಲ್ಲಿ ಕಂಗೊಳಿಸುತ್ತಿರುವ ಮಹಾಕ್ಷೇತ್ರವಾಗಿದೆ. ಈ ಕ್ಷೇತ್ರ ಪಶ್ಚಿಮ ಭಾಗದಲ್ಲಿ ಆದಿ ಶ್ರೀ ಬ್ರಹ್ಮ ದೇವರ ದೇವಸ್ಥಾನ, ಎಡಗಡೆಯಲ್ಲಿ ಬನ್ನಡ್ಕತ್ತಾಯಿ ದೈವದ ದೈವಸ್ಥಾನ, ದೇವಸ್ಥಾನದ ಆವರಣದಲ್ಲಿ ನಾಗಕ್ಷೇತ್ರದ ಗುಡಿಯೂ ಇದೆ. ಈ ಕ್ಷೇತ್ರದಲ್ಲಿ ಬ್ರಹ್ಮದೇವರು ಹಾಗೂ ಬನ್ನಡ್ಕತ್ತಾಯಿ ದೈವಗಳು ತಮ್ಮ ಕಾರಣಿಕದಿಂದ ಕ್ಷೇತ್ರವು ಬೆಳಗಿ ಮಹಾಕ್ಷೇತ್ರವೆನಿಸುವಂತೆ ಮಾಡಿದೆ.

RELATED ARTICLES
- Advertisment -
Google search engine

Most Popular