Thursday, July 25, 2024
Homeಉಡುಪಿಎ.20: ಕೊರಗಜ್ಜ ಮತ್ತು ಕೊರಗ ಪಂಜುರ್ಲಿ ಕ್ಷೇತ್ರ, ವಾರ್ಷಿಕ ನೇಮೋತ್ಸವ

ಎ.20: ಕೊರಗಜ್ಜ ಮತ್ತು ಕೊರಗ ಪಂಜುರ್ಲಿ ಕ್ಷೇತ್ರ, ವಾರ್ಷಿಕ ನೇಮೋತ್ಸವ

ಉಡುಪಿ : ಕೊರಗಜ್ಜ ಮತ್ತು ಕೊರಗ ಪಂಜುರ್ಲಿ ಕ್ಷೇತ್ರದಲ್ಲಿ ಸತ್ಯದೇವಾತೆ, ಪಿಲಿಚಾಮುಂಡಿ, ಮಂತ್ರದೇವತೆ, ವರ್ತೆಪಂಜುರ್ಲಿ, ಕೊರಗರ ಪಂಜುರ್ಲಿ,ಕೊರತಿ ಹಾಗೂ ಕೊರಗಜ್ಜ ದೈವಗಳ ನಮೋತ್ಸವ ಜರಗಲಿರುವುದು. ತಾ. 19.04.2024 ನೇ ಶುಕ್ರವಾರದಂದು ಬೆಳಿಗ್ಗೆ ಗಂಟೆ 6.00ಕ್ಕೆ ನವಕ ಪ್ರಧಾನ ಹೋಮ ಮತ್ತು ಗಣಹೋಮ ನಡೆಯುವುದು. ತಾ.20.04.2024 ನೇ ಶನಿವಾರದಂದು ಬೆಳಿಗ್ಗೆ ಗಂಟೆ 9.00 ಕ್ಕೆ ದೈವಗಳ ಭಂಡಾರ ಇಳಿಯುವುದು.ಮಧ್ಯಾಹ್ನ 12.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಂತರ ಮಧ್ಯಾಹ್ನ 2.30 ರಿಂದ ಸತ್ಯದೇವತೆ ನೇಮ ,ಸಂಜೆ ಗಂಟೆ 4.30ಕ್ಕೆ ಪಿಲಿಚಾಮುಂಡಿ ನೇಮ ನಡೆಯಲಿದೆ. ಸಾಯಂಕಾಲ ಗಂಟೆ 6.30ಕ್ಕೆ ಮಂತ್ರದೇವತೆ ಮತ್ತು ವರ್ತೆಪಂಜುರ್ಲಿ ನೇಮ ನಡೆಯಲಿದೆ. ರಾತ್ರಿ ಗಂಟೆ 8.30 ಕ್ಕೆ ಕೊರಗ ಪಂಜುರ್ಲಿ ನೇಮ ಮತ್ತು ರಾತ್ರಿ ಗಂಟೆ 2.00 ಕ್ಕೆ ಕೊರಗಜ್ಜ ನೇಮವು ನಡೆಯಲಿದೆ.

RELATED ARTICLES
- Advertisment -
Google search engine

Most Popular