ಎ.18: ಶ್ರೀ ದೇವಿ ಮಹಾತ್ಮೆ ಯಕ್ಷಗಾನ
ಕಾರ್ಕಳ: ಕಿನ್ನರಕಟ್ಟ ಬನಾನ್ ವಂಶಸ್ಥರು ಆರಾಧಿಸಿ ಪೂಜಿಸುವ ಶ್ರೀ ನಾಗ ದೇವರ ಬನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವು 21-4-2024 ಭಾನುವಾರದಂದು ನಡೆಯಲಿದೆ.
18-04-2024 ರಂದು ರಾತ್ರಿ ಕಾರ್ಕಳ ಜೋಡುಕಟ್ಟೆ “ಪ್ರೇಮಾನಿವಾಸ” ದ ಮುಂಭಾಗದಲ್ಲಿನ ಕಲ್ಲಗುಪ್ಪೆ ಶಾಲೆಯ ಮೈದಾನದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ, ಸಂಜೆ ಗಂಟೆ 5.45ಕ್ಕೆ ಚೌಕಿ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
20-4-2024 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ದೇವತಾ ಪ್ರಾರ್ಥನೆ, ಪುಣ್ಯಾಹ ಶುದ್ದಿ, ತೋರಣ ಮುಹೂರ್ತ, ಮಹಾಗಣಪತಿ ಹೋಮ, ನವಗ್ರಹಶಾಂತಿ, ಬಿಂಬಶುದ್ದಿ ಪ್ರಕ್ರಿಯೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಸಪರಿವಾರ ಬ್ರಹ್ಮಸ್ಥಾನದಲ್ಲಿ ಕಲಾಹೋಮ, ಅಶ್ವತ್ಥನಾರಾಯಣ ಪೂಜೆ, ಸಂಜೆ 5 ಗಂಟೆಯಿಂದ ಶ್ರೀ ನಾಗದೇವರ ಬನದಲ್ಲಿ ವಾಸ್ತುಪೂಜೆ, ಹೋಮ, ಬಲಿವಿಧಾನ, ಸಪ್ತಶುದ್ಧಿ ” ರಾಕ್ಷಘ್ನಹೋಮ, ಬಿಂಬಶಯ್ಯಾಧಿವಾಸ ಪ್ರಕ್ರಿಯೆ, ಅಷ್ಠಾವಧಾನ ಸೇವೆ, ನಾಗಮಂಡಲ ಚಪ್ಪರದಲ್ಲಿ ವಾಸ್ತುವಿದ್ಯಾಕಲಾಪ, ದಿಕ್ಷಾಲಿಕ ಬಲಿವಿಧಾನ, ಪ್ರಸಾದ ವಿತರಣೆ.
21-04-2024 ರಂದು ಬೆಳಿಗ್ಗೆ 8 ಗಂಟೆಯಿಂದ ಪುಣ್ಯಾಹನಾಂದೀ ಸಮಾರಾಧನೆ, ಪ್ರತಿಷ್ಠಾ ಪ್ರಧಾನಯಾಗ, ಶ್ರೀನಾಗದೇವರ ನೂತನ ಬಿಂಬಪ್ರತಿಷ್ಠೆ, 48 ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ತಿಲ, ಕೂಷ್ಮಾಂಡ, ಪವಮಾನಸೂಕ್ತ ಹೋಮ, ನಾಗಮಂಡಲ ಚಪ್ಪರದಲ್ಲಿ ಮಹಾಗಣಪತಿ ಹೋಮ, ಆಶ್ಲೇಷಾಬಲಿದಾನ, ವಟು ಆರಾಧನೆ, ದಂಪತಿಪೂಜೆ, ಆಚಾರ್ಯಪೂಜೆ, ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆ 1 ಮಹಾಅನ್ನಸಂತರ್ಪಣೆ, ಸಂಜೆ 6:30ಕ್ಕೆ ನಾಗಬನದಲ್ಲಿ ಶ್ರೀ ನಾಗದೇವರಿಗೆ ಕ್ಷೀರಾರ್ಥ್ಯ ಪ್ರದಾನಪೂರ್ವಕ “ಹಾಲಿಟ್ಟು ಸೇವೆ” ಪ್ರಸಾದ ವಿತರಣೆ,ರಾತ್ರಿ 8 ಗಂಟೆಗೆ ಶ್ರೀ ನಾಗದೇವರ ಪ್ರೀತ್ಯರ್ಥವಾಗಿ “ಅಷ್ಟಪವಿತ್ರ ನಾಗಮಂಡಲ” ಸೇವೆ, ರಾತ್ರಿ 12 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.
23-04-2024 ರಂದದು ರಾತ್ರಿ ಮತ್ತು 24-04-2024 ಬುಧವಾರದಂದು ಕುಕ್ಕಿನಂತಾಯ ಮತ್ತು ಪರಿವಾರ ದೈವಗಳ “ನೇಮೋತ್ಸವ” ನಡೆಯಲಿದೆ.