Wednesday, October 9, 2024
Homeಧಾರ್ಮಿಕಎ.22-26: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರ ಬ್ರಹ್ಮಕುಂಭಾಭಿಷೇಕ, ನಾಗಮಂಡಲ

ಎ.22-26: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರ ಬ್ರಹ್ಮಕುಂಭಾಭಿಷೇಕ, ನಾಗಮಂಡಲ

ಸುರತ್ಕಲ್ ಸಮೀಪದ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಎಪ್ರಿಲ್ 22 ರಿಂದ 30ರ ವರೆಗೆ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಏ.26ರಂದು ಬೆಳಗ್ಗೆ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಶ್ರೀ ಉಳ್ಳಾಯ, ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಕುಂಭಾಭಿಷೇಕ, ರಾತ್ರಿ ಕ್ಷೇತ್ರದ ನಾಗದೇವರ ನಾಗಮಂಡಲ ಸೇವೆ,ವಿಶೇಷ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಕ್ಷೇತ್ರದ ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ ಶಿಬರೂರು ಗುತ್ತು ಹೇಳಿದರು.

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ,ಸಾಂಸ್ಕೃತಿಕ ಸಹಿತ ಎಲ್ಲಾ ಸೇವೆಗಳಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಲು ಸಹಕರಿಸಬೇಕೆಂದರು. ಕ್ಷೇತ್ರದ ಮೊಕ್ತೇಸರ ಮಧುಕರ ಅಮೀನ್ ಮಾತನಾಡಿ, ಶಿಬರೂರು ಕ್ಷೇತ್ರದಲ್ಲಿ 2010ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟಿ ಮುಂದಾಳತ್ವದಲ್ಲಿ ನವೀಕರಣವಾಗಿ ಬ್ರಹ್ಮಕುಂಭಾಭಿಷೇಕವು ನಡೆದಿದ್ದು ,14 ವರ್ಷಗಳ ಬಳಿಕ ಇದೀಗ ಮತ್ತೆ ನೆರವೇರಲಿದೆ. ಕ್ಷೇತ್ರದ 1.50 ಕೋಟಿ ಅನುದಾನ ವೆಚ್ಚ ಮಾಡುವ ಜತೆಗೆ ಭಕ್ತಾಧಿಗಳ ಉದಾರ ದೇಣಿಗೆಯಿಂದ ಬಂದ ಅನುದಾನದಿಂದಲೂ ಕ್ಷೇತ್ರದ ಕಾಮಗಾರಿ ಭರದಿಂದ ನಡೆಯುತ್ತಿದೆ. 3 ಕೋಟಿ ರೂ. ಕಾಮಗಾರಿ ಪೂರ್ತಿಗೊಂಡಿದೆ. 4 ಬದಿಯ ಸಾಂಪ್ರದಾಯಿಕ ಗೋಪುರಗಳು, ದಾಖಲೆಯ ಸುಮಾರು 58 ಅಡಿ ಎತ್ತರದ ಧ್ವಜಸ್ತಂಭ ಪುನರ್ ನಿರ್ಮಾಣ ಮಾಡಲಾಗಿದೆ. ಸರಕಾರದ ಅನುಮತಿಗಳ ಸಹಕಾರದಲ್ಲಿ ಸ್ವರ್ಣ ಪಲ್ಲಕ್ಕಿಯ ಸಮರ್ಪಣೆ ತೀರ್ಮಾನಿಸಲಾಗಿದೆ. ಎಪ್ರಿಲ್ 22 ರಿಂದ 30ರ ಪ್ರತಿದಿನ ಅನ್ನ ಪ್ರಸಾದ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗುತ್ತಿಯೆಂದರು.

ಜೀರ್ಣೋದ್ದಾರ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಧ್ವಜಸ್ತಂಭಕ್ಕೆ ಪುರಾತನ ಕಂಚಿನ ಹೊದಿಕೆ, ದೈವದ ಗುಡಿಗೆ ಹಿತ್ತಾಳೆ ಹೊದಿಕೆ ಸಹಿತ ಕ್ಷೇತ್ರದ ಸಾಂಪ್ರದಾಯಿಕತೆಯನ್ನು ಹಾಗೆಯೇ ಉಳಿಸಿಕೊಂಡು ಅಭಿವೃದ್ಧಿ ನಡೆಯುತ್ತಿದೆ. ಕಟೀಲು ಕ್ಷೇತ್ರಕ್ಕೂ ಐತಿಹಾಸಿಕ ಕಾರಣಿಕ ಶಿಬರೂರು ದೈವ ಕ್ಷೇತ್ರಕ್ಕೆ ಅವಿನಾಭವ ಸಂಬಂಧವಿದ್ದು, ಜಿಲ್ಲೆ ಮಾತ್ರವಲ್ಲದೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಕ್ಷೇತ್ರದ ಬಾವಿಯ ತೀರ್ಥವು ವಿಷವನ್ನು ಅಮೃತ ಮಾಡುವ ಶಕ್ತಿಯನ್ನು ಹೊಂದಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು ತೀರ್ಥವನ್ನು ಸ್ವೀಕರಿಸುತ್ತಾರೆ. ಬ್ರಹ್ಮಕುಂಭಾಭಿಷೇಕದಂದು ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ 26 ವಿವಿಧ ಸಮಿತಿ ರಚಿಸಿ ಜವಾಬ್ದಾರಿ ಹಂಚಲಾಗಿದೆ .ಸಮಿತಿಗಳು ಸರ್ವಸಿದ್ಧತೆಯನ್ನು ಆರಂಭಿಸಿದೆ ಎಂದರು. ಪ್ರದ್ಯುಮ್ನ ರಾವ್ ಮಾತನಾಡಿ, ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿ„ ವಿಧಾನಗಳು ನಡೆಯಲಿದೆ. ಪ್ರತೀ ದಿನ ಸಂಜೆ ,ಜನೆ, ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಜಿತೇಂದ್ರ ಶೆಟ್ಟಿ ಕೊರ್ಯಾರು ಗುತ್ತು ತುಕರಾಮ ಶೆಟ್ಟಿ, ಪರ್ಲಬೆಲುಗುತ್ತು, ಮೊಕ್ತೇಸರ ಕಾಂತಪ್ಪ ಸಾಲಿಯಾನ್, ಸುಧಾಕರ ಶಿಬರೂರು, ಸುದೀಪ್ ಶೆಟ್ಟಿ, ಗೀತಾ ಶೆಟ್ಟಿ, ಸುರೇಂದ್ರ ಶೆಟ್ಟಿ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular