ಉಡುಪಿ: ಬೊಲ್ಯೊಟ್ಟು ಆಲಡೆಯ ವರ್ಷಾವಧಿ ಆಯನೋತ್ಸವ – ಸಿರಿಗಳ ಜಾತ್ರೆ ಮತ್ತು ಬ್ರಾಹ್ಮನ ಸುಹಾಸಿನಿ ಆರಾಧನೆ ಹಾಗೂ ಮಹಾ ಅನ್ನಸಂತರ್ಪಣೆಯು 22-04-2024 ರಿಂದ 23-04-2024 ರವರೆಗೆ ನಡೆಯಲಿದೆ.
22-04-2024 ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, 11 ರಿಂದ ಪೀಠ ಪೂಜೆ, ಧ್ವಜಾರೋಹಣ, ಧ್ವಜಪೂಜೆ, ಅಜೆಕಾಯಿ, ಮಧ್ಯಾಹ್ನ 12 ರಿಂದ ಮಹಾಪೂಜೆ, ಪ್ರಸಾದ ವಿತರಣೆ, 12:30 ರಿಂದ 3 ರ ತನಕ ಮಹಾ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಮಹಾಪ್ರಾರ್ಥನೆ, ರಾತ್ರಿ 8 ರಿಂದ ಪೀಠಪೂಜೆ, ಬೈಗಿನಬಲಿ ಪ್ರಾರಂಭ, ನೃತ್ಯಸೇವೆ, ರಾತ್ರಿ 11 ಗಂಟೆಗೆ ಕುಮಾರದರ್ಶನ, ಸಿರಿಗಳ ಜಾತ್ರೆ, ರಾತ್ರಿ 1 ಗಂಟೆಗೆ ರಂಗಪೂಜೆ, ಶ್ರೀ ಭೂತ ಬಲಿ, ರಾತ್ರಿ 2 ಗಂಟೆಗೆ ಬೊಲ್ಯೊಟ್ಟು ಆಯನೋತ್ಸವ , ಸ್ಥಳವಂದಿಗರ ತಟ್ಟೆ ಪ್ರಸಾದ, ಉದಯಾತ್ ಪೂರ್ವ 5 ರಿಂದ ಗಂಧ ಪೂಜೆ, ಪ್ರಸಾದ ವಿತರಣೆ, 6 ಗಂಟೆಗೆ ಧ್ವಜಾವರೋಹಣ, ಸುರ್ಯೋದಯಕ್ಕೆ ಮಹಾಸಂಪ್ರೋಕ್ಷಣೆ – ಮಹಾಮಂತ್ರಕ್ಷತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.