ಕಿನ್ನಿಗೋಳಿ: ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವವು 23-04-2024 ರಿಂದ 27-04-2024 ರ ವರೆಗೆ ನಡೆಯಲಿದೆ.
ಕಾರ್ಯಕ್ರಮದ ವಿವರ
22-4-2024 ರಂದು ಮಧ್ಯಾಹ್ನ ನವಕಪ್ರಧಾನ, ರಾತ್ರಿಬಲಿ, ಅಂಕುರಾರೋಹಣ ರಂಗಪೂಜೆ.
23-4-2024 ರಂದು ಮಂಗಳವಾರ ಬೆಳಿಗ್ಗೆ ಗಂಟೆ 8.00ಕ್ಕೆ ನವಕ ಪ್ರಧಾನ, ಗಂಟೆ 11.00ಕ್ಕೆ ಧ್ವಜಾರೋಹಣ 12.00 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ.
24-4-2024 ರಂದು ಬುಧವಾರ ಬೆಳಿಗ್ಗೆ ಗಂಟೆ 8.00ಕ್ಕೆ ನವಕಪ್ರಧಾನ, ಗಂಟೆ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ, ಮೂಡು ಧಾರಿಯ ವೇದಿಕಾ ಪೂಜಾ ಸೇವಾಸಕ್ತರಿಂದ ವೇದಿಕಾ ಪೂಜಾ ಸೇವೆ.
25-4-2024 ರಂದು ಗುರುವಾರ ಬೆಳಿಗ್ಗೆ ಗಂಟೆ 8.00ಕ್ಕೆ ನವಕ ಪ್ರಧಾನ, ಗಂಟೆ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ, ತೆಂಕು ಸವಾರಿ ವೇದಿಕಾ ಪೂಜಾ ಸೇವಾಸಕ್ತರಿಂದ ವೇದಿಕಾ ಪೂಜಾ ಸೇವೆ.
26-4-2024 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 8.00ರಿಂದ ನವಕಪ್ರಧಾನ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಹಗಲು ರಥಾರೋಹಣ, ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ, ಪಡು ಸವಾರಿ ವೇದಿಕಾ ಪೂಜಾ ಸೇವಾಸಕ್ತರಿಂದ ವೇದಿಕಾ ಪೂಜಾ ಸೇವೆ, ಶ್ರೀ ಭೂತ ಬಲಿ, ಕವಾಟ ಬಂಧನ, ಶಯನೋತ್ಸವ.
27-4-2024 ರಂದು ಶನಿವಾರ ಬೆಳಿಗ್ಗೆ ಗಂಟೆ 7.00ಕ್ಕೆ ಕವಾಟೋದ್ಘಾಟನೆ, ಅಭಿಷೇಕ, ಅಲಂಕಾರ, ಪ್ರಸನ್ನ ಪೂಜೆ, ಹೂವಿನ ಪೂಜೆ, ತುಲಾಭಾರ ಸೇವೆ. ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 10.00ರಿಂದ ಉತ್ಸವ ಬಲಿ, ಕಿನ್ನಿಗೋಳಿ ಪೇಟೆ ಸವಾರಿ ವೇದಿಕಾ ಪೂಜಾ ಸೇವಾಸಕ್ತರಿಂದ ವೇದಿಕಾ ಪೂಜಾ ಸೇವೆ, ಓಕುಳಿ, ರಥೋತ್ಸವ, ಹೂವಿನ ಪೂಜೆ, ಸುಡುಮದ್ದು ಪ್ರದರ್ಶನ, ಅವಕೃತ ಸ್ನಾನ, ಧ್ವಜಾವರೋಹಣ
28-4-2024ನೇ ಆದಿತ್ಯವಾರ : ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
25-4-2024ನೇ ಗುರುವಾರ ರಾತ್ರಿ 8.00 ರಿಂದ ಎಳತ್ತೂರು ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು, ಹಾಗೂ ಶಾರದಾ ಆರ್ಟ್ ಕಲಾವಿದೆರ್ ಮಂಜೇಶ್ವರ ಇವರಿಂದ ‘ಕಥೆ ಎಡ್ಡೆಂಡು’ ಹಾಸ್ಯಮಯ ತುಳು ನಾಟಕ ನಡೆಯಲಿದೆ.
27-04-2024ನೇ ಶನಿವಾರ ಬೆಳಿಗ್ಗೆ ಗಂಟೆ 8.00ರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. ಸಂಜೆ 5.45ರಿಂದ ಶಕೀಲಾ ದುರ್ಗಾನಂದ ಶೆಟ್ಟಿ ಹಾಗೂ ತಾಳಿಪಾಡಿಗುತ್ತು ಪಾದೆಮನೆ ಕುಟುಂಬಿಕರು ಇವರ ವತಿಯಿಂದ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಜರಗಲಿರುವುದು.
14-05-2024ನೇ ಮಂಗಳವಾರ ಬೆಳಿಗ್ಗೆ 10.00ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.