Sunday, January 19, 2025
Homeಧಾರ್ಮಿಕಏ.24: ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಚಿಟ್ಪಾಡಿ, ಧರ್ಮ ದೇವತಾ ಪ್ರತಿಷ್ಠಾಪನಾ ನೇಮೋತ್ಸವ

ಏ.24: ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಚಿಟ್ಪಾಡಿ, ಧರ್ಮ ದೇವತಾ ಪ್ರತಿಷ್ಠಾಪನಾ ನೇಮೋತ್ಸವ

ಉಡುಪಿ: ದಿನಾಂಕ 24.04.2024 ನೇ ಬುಧವಾರ ದಿಂದ 27.04.2024 ನೇ ಶನಿವಾರದವರೆಗೆ ಪೆಜತ ಕಟ್ಟೆ ಬೀರೊಟ್ಟು ಪಿಲಿಚಂಡಿ ಸಾನದಲ್ಲಿ ಧರ್ಮದೇವತಾ ಪ್ರತಿಷ್ಠಾಪನಾ ನೇಮೋತ್ಸವ ನಡೆಯಲಿದೆ.

ದಿನಾಂಕ 24.04.2024 ನೇ ಬುಧವಾರ ಹೊರಕಾಣಿಕೆ ಮತ್ತು ಬಿಂಬಗಳ ಮೆರವಣಿಗೆ ಸಂಜೆ 4ರಿಂದ ಚಿಟ್ಟಾಡಿ ಶ್ರೀ ಶ್ರೀನಿವಾಸ ದೇವರ ಸನ್ನಿಧಿಯಿಂದ ದೇವರ ದೈವಸ್ಥಾನದ ನೂತನ ಮಂಚ – ಬಿಂಬಗಳ ಮೆರವಣಿಗೆ ಹೊರ ಕಾಣಿಕೆ ಸಮರ್ಪಣೆ, ಗೇಹ – ಪ್ರತಿಗ್ರಹ ತೋರಣಾ ಮುಹೂರ್ತ, ಮಹಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಸಪ್ತ ಶುದ್ಧ ಪ್ರಕ್ರಿಯೆ, ವಾಸ್ತು ಪ್ರಕ್ರಿಯೆಗಳು ನಡೆಯಲಿದೆ.

ದಿನಾಂಕ 25.04.2024 ನೇ ಗುರುವಾರ ದಂದು ಬೆಳಿಗ್ಗೆ 8ರಿಂದ ಪುಣ್ಯಾಹ ಪಂಚಗವ್ಯ ಶುದ್ದಿ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ಪ್ರಾಯಶ್ಚಿತ ಹೋಮ ,ಬಿಂಬ ಶುದ್ದಿ ಪ್ರಕ್ರಿಯೆಗಳು, ಸಂಜೆ ಗಂಟೆ 5 ರಿಂದ ವಾಸ್ತು ವಿಧಾನಗಳು, ರಾಕ್ಷೋಘ್ನ ಹೋಮ, ಇಂದ್ರಾದಿ ಬಲಿ, ಬಿಂಬಾದಿ ವಾಸ – ಶಿಖಾರಾದಿ ವಾಸ, ಕಲಾಶದಿವಾದ ಪ್ರಕ್ರಿಯೆಗಳು ನಡೆಯಲಿದೆ.

ದಿನಾಂಕ 26.04.2024 ನೇ ಶುಕ್ರವಾರ ಬೆಳಿಗ್ಗೆ 6.30 ರಿಂದ ಪ್ರತಿಷ್ಠಾ ಪೂವ್ರಾಂಗ ಪ್ರಕ್ರಿಯೆಗಳು ಶಿಖರ ಪ್ರತಿಷ್ಠೆ, ಪಿಲಿಚಂಡಿ, ನಂದಿ, ಬೊಬ್ಬರ್ಯ, ನೀಚ ದೈವಗಳ ಪ್ರತಿಷ್ಠೆ ಪಂಚಾಮೃತ ಕಲಾಶಭಿಷೇಕ ಪನಿವಾರಿ ಪ್ರಸನ್ನ ಪೂಜೆ. ಮಧ್ಯಾಹ್ನ 12 ರಿಂದ ಧರ್ಮದೇವತಾ ಸಂದರ್ಶನ, ಪ್ರಸಾದ ವಿತರಣೆ, ಸಂಜೆ 5.30ರಿಂದ ಪಿಲಿಚಂಡಿ ಸಾನದಲ್ಲಿ ಪನಿವಾರ, ಹೂವಿನ ಪೂಜೆ, ಬೀಡಿನಗುಡ್ಡೆ ಮೈದಾನದ ಕೋಲದ ಕಟ್ಟೆಯಲ್ಲಿ ಪುಣ್ಯಾಹ ಶುದ್ದಿ, ಕಲಶ ಪೂಜೆ, ರಾತ್ರಿ 8.30ರಿಂದ ಮಹಾ ದೇವಿಯ ಸಂಪ್ರಿತಿಗೆ ಗೊಂದೊಲು ಸೇವೆ.

ದಿನಾಂಕ 27.04.2024 ನೇ ಶನಿವಾರ ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ನಡೆಯುತ್ತದೆ. ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

RELATED ARTICLES
- Advertisment -
Google search engine

Most Popular