ಮೂಡುಬಿದಿರೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ-ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ,
ವಕೀಲರಾಗಿದ್ದ ವೇಣುಗೋಪಾಲ್ ಮತ್ತು ಬಹುಮುಖ ಪ್ರತಿಭೆಯ ಪತ್ರಕರ್ತರಾಗಿದ್ದ ಶೇಖರ ಅಜೆಕಾರು ಇವರ ಸಂಸ್ಮರಣ ಕಾರ್ಯಕ್ರಮ ಅ.26ರಂದು ಅಪರಾಹ್ನ 3 ಗಂಟೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರಗಲಿದೆ.
ಸಮಾಜ ಮಂದಿರ ಸಭಾದ ಸಹಕಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದು ಹಿರಿಯ ವಕೀಲ ಎಂ. ಬಾಹುಬಲಿ ಪ್ರಸಾದ್ ಆವರು ವೇಣುಗೋಪಾಲ್ ಸಂಸ್ಮರಣೆ ನಡೆಸಿಕೊಡಲಿದ್ದಾರೆ. ಪತ್ರಕರ್ತ ರವೀಂದ್ರ ಶೆಟ್ಟಿ ಮಂಗಳೂರು ಇವರು `ಮಾಧ್ಯಮ ಮತ್ತು ವಿಶ್ವಾಸಾರ್ಹತೆ’ ಕುರಿತು ಮಾತನಾಡಲಿದ್ದಾರೆ.
ಶೇಖರ ಅಜೆಕಾರು ಅವರ ಸಂಸ್ಮರಣೆಯನ್ನು ಧನಂಜಯ ಮೂಡುಬಿದಿರೆ ನಡೆಸಿಕೊಡಲಿದ್ದಾರೆ. ತದಂಗವಾಗಿ ಸಾಹಿತಿ ಸದಾನಂದ ನಾರಾವಿ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಟಿ ನಡೆಯಲಿದೆ.
ಕವಿಗಳಾಗಿ ಡಾ. ಸುರೇಶ ನೆಗಳಗುಳಿ, ಸೌಮ್ಯ ಕುಗ್ವೆ. (ಹವ್ಯಕ ಕನ್ನಡ), ಹಸನಬ್ಬ (ಬ್ಯಾರಿ), ವನಜಾ ಜೋಶಿ, ಉಜಿರೆ (ಚಿತ್ಪಾವನಿ), ಸದಾನಂದ ನಾರಾವಿ, ಪದ್ಮನಾಭ ಮಿಜಾರು (ತುಳು), ರೇಮಂಡ್ ಡಿಕೂನ ತಾಕೊಡೆ ಹೆರಾಲ್ಡ್ ತಾವ್ರೋ , ಮುಕುಂದ ಕಾಮತ್ ಮಿಜಾರು (ಕೊಂಕಣಿ), ಲಿಂಗಪ್ಪ ಗೌಡ ನೀರ್ಕೆರೆ (ಕುಡುಬಿ ಕೊಂಕಣಿ), ಅನಿತಾ ಶೆಟ್ಟಿ ಮೂಡುಬಿದಿರೆ, ನಾಗಶ್ರೀ ಎಸ್. ಭಂಡಾರಿ, ರಾಮಕೃಷ್ಣ ಶೀರೂರು, ಮಾನಸ ಪ್ರವೀಣ್, ಶರಣ್ಯಾ ಬೆಳುವಾಯಿ (ಕನ್ನಡ) ಭಾಗವಹಿಸಲಿದ್ದಾರೆ ಎಂದು ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ತಿಳಿಸಿದ್ದಾರೆ.