ಓರ್ವ 27 ವರ್ಷದ ಇಂಗ್ಲೆಂಡ್ ನಿವಾಸಿ, ಜೊಸೇಫ್ ಬಟರ್ ಚಿಕನ್ ತಿಂದು, ಸಾವಿಗೀಡಾಗಿದ್ದಾನೆ. ಮನೆಯಲ್ಲಿ ಊಟ ಸೇವಿಸುತ್ತಿದ್ದಾಗ, ಒಂದೇ ಒಂದು ಸಾರಿ ಬಟರ್ ಚಿಕನ್ ತಿಂದಿದ್ದು, ಅದರಲ್ಲಿ ಹಾಕಿದ್ದ ಕೆಲ ಒಣಹಣ್ಣುಗಳಿಂದ ಜೊಸೆಫ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಒಣಹಣ್ಣು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಕೂಡ, ಈತನಿಗೆ ಅದರಿಂದ ಅಲರ್ಜಿಯಾಗಿತ್ತು. ಈ ಅಲರ್ಜಿ ಎಷ್ಟು ಡೇಂಜರ್ ಎಂದರೆ, ಅದು ಪ್ರಾಣವನ್ನೇ ತೆಗೆದುಕೊಳ್ಳುವ ಅಲರ್ಜಿ. ಹಾಗಾಗಿ ಬಟರ್ ಚಿಕನ್ ಸೇವಿಸುವಾಗ, ಅದರಲ್ಲಿದ್ದ ಒಣಹಣ್ಣು ಸೇವಿಸಿ, ವ್ಯಕ್ತಿಗೆ ಅಲರ್ಜಿಯಾಗಿದೆ. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ, ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವನ್ನಪ್ಪಿದ್ದಾನೆ.