Sunday, July 14, 2024
Homeಧಾರ್ಮಿಕಎ.28 ರಿಂದ ಮೇ1: ಮಿತ್ತಬೈಲ್ ಶ್ರೀರಾಮ ಮಂದಿರದಲ್ಲಿ ಗೋಕರ್ಣ ಶ್ರೀ ಮೊಕ್ಕಾಂ

ಎ.28 ರಿಂದ ಮೇ1: ಮಿತ್ತಬೈಲ್ ಶ್ರೀರಾಮ ಮಂದಿರದಲ್ಲಿ ಗೋಕರ್ಣ ಶ್ರೀ ಮೊಕ್ಕಾಂ

ಮೂಡುಬಿದಿರೆ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಮಿತ್ತಬೈಲು ಶ್ರೀ ರಾಮ ಮಂದಿರದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು ಮೊದಲ ಮೊಕ್ಕಾಂ ನಡೆಸಲಿದ್ಧಾರೆ. ಎ28ರಂದು ಸಂಜೆ ಶ್ರೀಗಳವರ ಪುರಪ್ರವೇಶ, ವೈಭವದ ಸ್ವಾಗತ, ನೂತನ ಸಭಾಗೃಹ ಉದ್ಘಾಟನೆ, ಎ.29ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ ಪೂರ್ಣಾಹುತಿ, ಸಂಜೆ ಮಂದಿರ ಆವರಣದಲ್ಲಿ ಚಂದ್ರಮಂಡಲ ( ಭಾಂಢೀ) ರಥೋತ್ಸವ, ರಥ ಕೊಠಡಿ ಉದ್ಘಾಟನೆ, ಎ 30 ರಂದು ಚಂಡಿಕಾಹವನ, ಅಪರಾಹ್ನ ಶ್ರೀಗಳವರಿಂದ ಮಂದಿರದ ಸುವರ್ಣ ಮಹೋತ್ಸವ ದೀಪ ಪ್ರಜ್ವಲನ , ಸೇವಾದಾರರು, ದಾನಿಗಳಿಗೆ ಗೌರವ ಪ್ರಸಾದ, ಮೇ1 ರಂದು ಶತಕಲಶಾಭಿಷೇಕ, ಮಹಾಸಭಾ ಶ್ರೀಗಳವರಿಂದ ಆಶೀರ್ವಚನ, ಸಂಜೆ ಮುಂದಿನ ಮೊಕ್ಕಾಂಗೆ ಶ್ರೀಗಳವರು ನಿರ್ಗಮಿಸಲಿದ್ಧಾರೆ ಎಂದು ಮಂದಿರದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular