ಕಾರವಾರ: ಅಂಗನವಾಡಿಗೆ ತೆರಳಿದ್ದ ಮೂರು ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಕಾರವಾರ ಜಿಲ್ಲೆಯ ಮುಂಡಗೋಡು ಅಳೂರು ಓಣಿಯಲ್ಲಿ ನಡೆದಿದೆ.
ಮಯೂರಿ(3) ಮೃತ ಬಾಲಕಿಯಾಗಿದ್ದಾಳೆ. ಸ್ಥಳೀಯ ಮಾರಿಕಾಂಬ ಅಂಗನವಾಡಿಗೆ ಬಾಲಕಿ ತೆರಳಿದ್ದಳು. ಹೊರಬದಿಯ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಾಲಿಗೆ ಹಾವು ಕಚ್ಚಿದೆ. ಬಳಿಕ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.
ಹಾವು ಕಚ್ಚಿ ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಸಾವು
RELATED ARTICLES