Saturday, December 14, 2024
Homeರಾಜ್ಯಶಾಲಾ ಬಸ್ ಚಕ್ರಕ್ಕೆ ಸಿಲುಕಿ 4 ವರ್ಷದ ಮಗು ಸಾವು

ಶಾಲಾ ಬಸ್ ಚಕ್ರಕ್ಕೆ ಸಿಲುಕಿ 4 ವರ್ಷದ ಮಗು ಸಾವು


ಚಾಮರಾಜನಗರ: ತನ್ನದೇ ಶಾಲಾ ಬಸ್ ಚಕ್ರಕ್ಕೆ ಸಿಲುಕಿ 4 ವರ್ಷದ ಮಗು ಸಾವು ಕಂಡ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಘಟನೆ ನಡೆದಿದೆ.
ಪ್ರಿಕೆಜಿ ಓದುತ್ತಿರುವ ಮಾನ್ವಿತಾ ಮೃತಪಟ್ಟ ಮಗು ಎಂದು ಹೇಳಲಾಗಿದೆ. ತೆರಕಣಾಂಬಿಯ ಚಂದನ ಶಾಲೆಯ ಮಗು ಮಾನ್ವಿತಾ ಗುಡಿಗಾಲ ಗ್ರಾಮಕ್ಕೆ ಶಾಲಾ ಬಸ್ ನಲ್ಲಿ ಆಗಮಿಸಿದ್ದು, ಚಾಲಕ ಬಸ್ ನಿಂದ ಮಗುವನ್ನು ಇಳಿಸಿದ್ದಾನೆ.
ಬಸ್ ರಿವರ್ಸ್ ತೆಗೆಯುವಾಗ ಸರಿಯಾಗಿ ಗಮನಿಸದೆ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ. ಚಂದನ ಕಾನ್ವೆಂಟ್ ನ ಬಸ್ ಹರಿದು ಮಗು ಮಾನ್ವಿತಾ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular