Saturday, January 18, 2025
Homeರಾಷ್ಟ್ರೀಯಬೋರ್​ವೆಲ್​ಗೆ ಬಿದ್ದಿದ್ದ 5 ವರ್ಷದ ಬಾಲಕನನ್ನು ಹೊರತೆಗೆದರೂ ಪ್ರಾಣ ಉಳಿಲಿಲ್ಲ

ಬೋರ್​ವೆಲ್​ಗೆ ಬಿದ್ದಿದ್ದ 5 ವರ್ಷದ ಬಾಲಕನನ್ನು ಹೊರತೆಗೆದರೂ ಪ್ರಾಣ ಉಳಿಲಿಲ್ಲ

ರಾಜಸ್ಥಾನದ ದೌಸಾದಲ್ಲಿ ಬೋರ್​ವೆಲ್​ಗೆ ಬಿದ್ದಿದ್ದ ಬಾಲಕನನ್ನು 55 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಹೊರಗೆ ತೆಗೆದರೂ ಪ್ರಾಣ ಉಳಿಯಲಿಲ್ಲ. 150 ಅಡಿ ಆಳದ ಬೋರ್​ವೆಲ್​ಗೆ ಆತ ಬಿದ್ದಿದ್ದ, 5 ವರ್ಷದ ಬಾಲಕನನ್ನು ಆರ್ಯನ್ ಎಂದು ಗುರುತಿಸಲಾಗಿದೆ.

ಆತನನ್ನು ಹೊರ ತೆಗೆಯುವಷ್ಟರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ತಂದೆ ಹಾಲಿನ ಬಾಟಲಿ ಹಿಡಿದು ಮಗನ ಬರುವಿಕೆಗಾಗಿ ಕಾದಿದ್ದರು ಆದರೆ ಬದುಕಿ ಬರಲೇ ಇಲ್ಲ.

ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಖಾಡ್ ಗ್ರಾಮದ ಗದ್ದೆಯಲ್ಲಿ ಆಟವಾಡುತ್ತಿದ್ದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ. ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಮಗುವನ್ನು ತಲುಪಲು ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಿ ಸಮಾನಾಂತರ ಹೊಂಡವನ್ನು ತೆಗೆಯಲಾಯಿತು.

ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಅಸಂಖ್ಯಾತ ಸವಾಲುಗಳಿವೆ ಎಂದು ಹೇಳಿದ್ದರು ನೀರಿನ ಮಟ್ಟ ಸುಮಾರು 160 ಅಡಿ ಎಂದು ಅಂದಾಜಿಸಲಾಗಿದೆ.

ಕಾರ್ಯಾಚರಣೆ ಸಂದರ್ಭದಲ್ಲಿ ಯಂತ್ರವು ಕೆಟ್ಟು ಹೋಗಿ ಹೊಸ ಯಂತ್ರವನ್ನು ತರಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಸೆಪ್ಟೆಂಬರ್‌ನಲ್ಲಿ, ದೌಸಾದ ಬಂಡಿಕುಯಿ ಪ್ರದೇಶದಲ್ಲಿ 35 ಅಡಿ ತೆರೆದ ಬೋರ್‌ವೆಲ್‌ನಿಂದ ಎರಡು ವರ್ಷದ ಬಾಲಕಿಯನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ 18 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿತ್ತು.ಬಾಲಕಿ 28 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು.

RELATED ARTICLES
- Advertisment -
Google search engine

Most Popular