Sunday, July 14, 2024
Homeಉಡುಪಿಎ.9-18: ಶ್ರೀ ಶೀರೂರು ಮೂಲ ಮಠದಲ್ಲಿ ಶ್ರೀ ರಾಮ ನವಮೀ ಮಹೋತ್ಸವ

ಎ.9-18: ಶ್ರೀ ಶೀರೂರು ಮೂಲ ಮಠದಲ್ಲಿ ಶ್ರೀ ರಾಮ ನವಮೀ ಮಹೋತ್ಸವ

ಶೀರೂರು: ಶ್ರೀ ಶೀರೂರಿನ ಮೂಲ ಮಠದಲ್ಲಿ ಶ್ರೀ ರಾಮನವಮೀ ಮಹೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು 09.04.2024 ರಿಂದ ಪ್ರಾರಂಭಗೊಂಡು 18.04.2024 ರವರೆಗೆ ನಡೆಯಲಿದೆ.

09-04-2024 ಮಂಗಳವಾರ ಬೆಳಿಗ್ಗೆ ಹಯಗ್ರೀವ ಮಂತ್ರ ಹೋಮ, ಪ್ರತಿದಿನ ಸಂಜೆ 5:30 ರಿಂದ ಭಕ್ತಿ ರಸಮಂಜರಿ, ಕುಣಿತ ಭಜನೆ, 10-04-2024 ಬುಧವಾರ ಬೆಳಿಗ್ಗೆ ಶಾಕಲ ಋಕ್ಸಂಹಿತಾಯಾಗ , ಸಂಜೆ ಕುಂಜಾರುಗಿರಿ ಬಳಗದ ಸದಸ್ಯರಿಂದ ” ಛತ್ರಪತಿ ಶಿವಾಜಿ” ಐತಿಹಾಸಿಕ ನಾಟಕ ನಡೆಯಿತು.

11-04-2024 ಗುರುವಾರ ಸಂಜೆ 4 ಗಂಟೆಗೆ ಪಟ್ಟದ ದೇವರೊಂದಿಗೆ ಶ್ರೀ ಚಿತ್ರಾಪುರ ಸ್ವಾಮಿಗಳ ಆಗಮನ, ಗಂಗಾಶಶಿಧರ್‌ ಅವರಿಂದ ವಯೋಲಿನ್ ವಾದನ, 12-04-2024 ಶುಕ್ರವಾರ ಸಂಜೆ ಮಾರ್ಪಳ್ಳಿ ಮಹಾಲಿಂಗೇಶ್ವರ ಚೆಂಡೆ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ಊರ ಪರ್ಬ ನಡೆಯಲಿದೆ.

13-04-2024 ಶನಿವಾರ ಸಂಜೆ 4ಗಂಟೆಗೆ ಪಟ್ಟದ ದೇವರೊಂದಿಗೆ ಶ್ರೀ ಕಾಣಿಯೂರು ಸ್ವಾಮಿಗಳ ಅಗಮನ, ಭೂತರಾಜರ ಪೂಜೆ, ಸುಧೀರ್‌ ಕೊಡವೂರು ಇವರಿಂದ ಶ್ರೀ ನರಸಿಂಹ ನೃತ್ಯ ರೂಪಕ ನಡೆಯಲಿದೆ. 14-04-2024 ಭಾನುವಾರ ಸಂಜೆ ಕಟ್ಟೆಪೂಜೆ, ಕುದ್ರೋಳಿ ಗಣೇಶ್ ರವರಿಂದ ಮ್ಯಾಜಿಕ್ ಷೋ ನಡೆಯಲಿದೆ. 15-04-2024 ಸೋಮವಾರ ಸಂಜೆ ಮೈಸೂರು ರಾಮಚಂದ್ರ ಆಚಾರ್ಯ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. 16-04-2024 ಮಂಗಳವಾರ ಸಂಜೆ ಪದ್ಮಶ್ರೀ ಪಂಡಿತ್‌ ವೆಂಕಡೇಶ್‌ ಕುಮಾರ್‌ ಅವರಿಂದ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನಡೆಯಲಿದೆ. 17-04-2024 ಬುಧವಾರ೪ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಕ್ರ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 3 ರಿಂದ ಸಂಗೀತ ಕಾರ್ಯಕ್ರ, ಸಂಜೆ 4 ಗಂಟೆಗೆ ಪಟ್ಟದ ದೇವರೋಂದಿಗೆ ಶ್ರೀ ಕೃಷ್ಣಾಪುರ ಸ್ವಾಮಿಗಳ ಅಗಮನ ಪ್ರಾಣ ದೇವರ ರಂಗಪೂಜೆ, ರಥೋತ್ಸವ, ಓಲಗ ಮಂಟಪ ಪೂಜೆ ನಡೆಯಲಿದೆ.

18.04.2024 ನೇ ಗುರುವಾರ ಬೆಳಿಗ್ಗೆ 9 ಗಂಟೆಗೆ ಹಗಲು ರಥೋತ್ಸವ, ರಾತ್ರಿ 9 ಗಂಟೆಗೆ ಶ್ರೀ ಮಠದ ಬೊಬ್ಬರ್ಯ ಕೋಲ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

RELATED ARTICLES
- Advertisment -
Google search engine

Most Popular