ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಕ್ಷೇತ್ರದ ಪ್ರಧಾನ ತಂತ್ರಿಗಳಾದ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕರಾದ ವೇ .ಮೂ. ಶ್ರೀ ಕೆ. ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ದಿನಾಂಕ 09-04-2024ರ ಮಂಗಳವಾರದಂದು ಬ್ರಹ್ಮಕಲಶೋತ್ಸವಕ್ಕೆ ಚಾಲನೆ ದೊರಕಲಿದೆ.
ಬೆಳಿಗ್ಗೆ ಗಂಟೆ 8ಕ್ಕೆ ಮಾರಿಯಮ್ಮನಲ್ಲಿ ಪ್ರಾರ್ಥನೆ, ಬೆಳಿಗ್ಗೆ ಗಂಟೆ 8.30ಕ್ಕೆ ಭೂಕರ್ಷಣ ಖನನ, ಹರಣ, ದಾಹ, ಪೂರಣ, ಬೀಜ ವಪನ, ಬೆಳಿಗ್ಗೆ ಗಂಟೆ 11.00ಕ್ಕೆ ರಾಜಗೋಪುರ-ಶಿಲಾನ್ಯಾಸ, ಬೆಳಿಗ್ಗೆ ಗಂಟೆ 11.09ರಿಂದ ನೂತನ ಭೋಜನ ಶಾಲೆಗೆ ಶಂಕು ಸ್ಥಾಪನೆ, ಆಡಳಿತ ಕಛೇರಿ ಶಂಕು ಸ್ಥಾಪನೆ ಸುಸಜ್ಜಿತ ಶೌಚಾಲಯಕ್ಕೆ ಶಂಕು ಸ್ಥಾಪನೆ, ಬೆಳಿಗ್ಗೆ ಗಂಟೆ 11.30ರಿಂದ ಸಭಾ ಕಾರ್ಯಕ್ರಮ ಬ್ರಹ್ಮಕಲಶೋತ್ಸವ ಸಮಿತಿ ಉದ್ಘಾಟನೆ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಉದ್ಘಾಟನೆ ಹಾಗೂ ಮಧ್ಯಾಹ್ನ ಗಂಟೆ 01.00ರಿಂದ ಅನ್ನಸಂತರ್ಪಣೆ ನಡೆಯಲಿದೆ.