ನಡೆಯದಿದ್ದರೆ ದಾರಿ ಸಾಗದು ದುಡಿಯದಿದ್ದರೆ ಬದುಕು ಸಾಗದು ನಿರ್ಮಲ ಚಿತ್ತದಿಂದ ಕುಳಿತು ಆಲೋಚಿಸಿ ನಿಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಹೊಳೆ,ತೋಡು,ಕಿರು,ಕಾಲುವೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸೇರಿಸಲು ಅನಾದಿಯಿಂದಲೂ ಮರ ಅಡಿಕೆ ಮರದ ತುಂಡುಗಳನ್ನು ಜೋಡಿಸಿ ಮಾನವ ನಿರ್ಮಿತ ಬಾಳ ಬಂಡಿಗೆ ಮಳೆಗಾಲ ಬಂದರೆ ಊರೂರು ಸುತ್ತಿ ಬರಬೇಕಾಗುತ್ತದೆ. ಅದಕ್ಕೆ ಸಮೀಪದಲ್ಲಿ ಸೇರಲು ಕಾಲು ಸಂಕಗಳ ಜೋಡಣೆ ಮಾಡಿ ಪ್ರಯಾಣ ಚಕ್ರ ಜೋಡಿಸುವ ನಿಸರ್ಗ ಮಾನವ ನಿರ್ಮಿತ ಕೊಂಡಿ ಸುಸೂತ್ರವಾಗಿ ಕಾರ್ಯ ನಡೆಯುತ್ತದೆ.
ಆದರೆ ಇತ್ತೀಚೆಗೆ ಕಿಂಡಿ ಅಣೆಕಟ್ಟು ತೂಗು ಸೇತುವೆ ಗ್ರಾಮೀಣ ಭಾಗದಲ್ಲಿ ಇಂತಹ ಕಾಲು ಸಂಕವೆ ಇದರಲ್ಲಿ ಕೈ ಹಿಡಿಯಾಗಿ ಕೈ ತಾಂಗುಗಳನ್ನು ನಮ್ಮ ಹಿರಿಯರು ನಿರ್ಮಿಸಿ ಸಣ್ಣ ಮಕ್ಕಳಿಗೆ ವೃದ್ಧರಿಗೆ ಸುಲಲಿತವಾಗಿ ಹೋಗುವಂತೆ ಮುನ್ನೆಚ್ಚರಿಕೆ ಕ್ರಮವನ್ನು ನೋಡಿಕೊಳ್ಳುತ್ತಾರೆ .ಆದರೆ ಇಂದು ವಿಜ್ಞಾನ ತಂತ್ರಜ್ಞಾನ ಮುಂದುವರಿದರು ನಮ್ಮಲ್ಲಿ ಸಿಗುವ ಮರ ಅಡಿಕೆ ಮರಗಳಿಂದ ಕಾಲುಸಂಕ ಜೋಡಣೆ ಅದ್ಭುತವೇ ಸರಿ ಒಳ್ಳೆಯತನಕ್ಕೆ ಹಣದ ಅವಶ್ಯಕತೆ ಇಲ್ಲ ಒಳ್ಳೆಯ ಮನಸ್ಸಿದ್ದರೆ ಸಾಕು, ಉತ್ತಮ ಸ್ನೇಹಕ್ಕೆ ಸಂಬಂಧದ ಅವಶ್ಯಕತೆ ಇಲ್ಲ ಮನಸ್ಸಿನ ಭಾವನೆಗಳು ಒಂದಾದರೆ ಸಾಕು ಅದೇ ಬದುಕು ಜಟಕಾಬಂಡಿ. ಅಂದ ಮತ್ತು ಆನಂದ ಬೇರೆಲ್ಲೂ ಇರುವುದಿಲ್ಲ ನಿಮ್ಮ ನಿಮ್ಮೊಳಗೆ ಇರುತ್ತದೆ ಮತ್ತೆಲ್ಲೂ ಹುಡುಕಬೇಡಿ. ಇದು ಈಶ್ವರ ಮಂಗಲ ಸಾಮೇತಡ್ಕದ ಕೃಷ್ಣಶರ್ಮರಲ್ಲಿ ಕಂಡು ಬಂದ ಸಂಕ
ಚಿತ್ರ: ವೆಂಕಟ್ರಮಣ ಭಟ್ ನೂಜಿ

ಬರಹ :ಕುಮಾರ್ ಪೆರ್ನಾಜೆ