Sunday, July 14, 2024
Homeಆರೋಗ್ಯಜವನೆರ್ ಬೆದ್ರ ಫೌಂಡೇಶನ್ (ರಿ.) ಆಶ್ರಯದಲ್ಲಿ ನಡೆದ ಮಹಾರಕ್ತದಾನ ಶಿಬಿರ

ಜವನೆರ್ ಬೆದ್ರ ಫೌಂಡೇಶನ್ (ರಿ.) ಆಶ್ರಯದಲ್ಲಿ ನಡೆದ ಮಹಾರಕ್ತದಾನ ಶಿಬಿರ

ಜವನೆರ್ ಬೆದ್ರ ಫೌಂಡೇಶನ್ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಮಹಾರಕ್ತದಾನ ಶಿಬಿರವು ಜೂ. 8ರಂದು ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ಜರಗಿತು. ಸಮಾಜಮಂದಿರ ಸಭಾದ ಹಿರಿಯ ಸದಸ್ಯ ನ್ಯಾಯವಾದಿ ಕೆ. ಆರ್. ಪಂಡಿತ್ ಶಿಬಿರವನ್ನು ಉದ್ಘಾಟಿಸಿದರು. ಎವರ್ ಕೇರ್ ಕ್ಲಿನಿಕ್ ನ ವೈದ್ಯ ಡಾ. ನಾರಾಯಣ ಪೈ ಬಿ., ನಿವೃತ್ತ ಸುಬೇದಾರ್ ಮೇಜರ್ ರಾಜೇಂದ್ರ ಜಿ., ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ಪೂರಣ ಕೇಂದ್ರದ ಉತ್ಕರ್ಷ್ ಮತ್ತು ಆ್ಯಂಟನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವನೆರ್ ಬೆದ್ರ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಸ್ಥೆಯ ರಕ್ತನಿಧಿ ಕಳೆದ 7 ವರ್ಷಗಳಿಂದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯಲಿ ತುರ್ತು ರಕ್ತದ ಅವಶ್ಯಕತೆ ಸಂದರ್ಭದಲ್ಲಿ ರಕ್ತದಾನಿಗಳ ಸಹಕಾರದಿಂದ 10,000ಕ್ಕಿಂತಲೂ ಅಧಿಕ ಯೂನಿಟ್ ರಕ್ತವನ್ನು ಪೂರೈಸಿದೆ ಎಂದರು. ಇಂದು ಮಳೆ ಗಾಳಿ ಇದ್ದರೂ ವಾರದ ನಡುವಿನ ದಿನವಾದರೂ ಮಹಾ ರಕ್ತದಾನ ಶಿಬಿರದಲ್ಲಿ 137 ಜನ ತಮ್ಮ ಹೆಸರು ದಾಖಲಿಸಿದ್ದು 116 ರಕ್ತದಾನಿಗಳು ರಕ್ತದಾನ ಮಾಡಿರುತ್ತಾರೆ.

ಮೂಡುಬಿದ್ರೆ ಮಟ್ಟದ ದಾಖಲೆ ರಕ್ತದಾನ ಶಿಬಿರ ಎಂದು ಹೇಳಲಾಗುತ್ತಿದೆ, ಪರಿಸರ ದಿನಾಚರಣೆ ಅಂಗವಾಗಿ ಎಲ್ಲ ರಕ್ತದಾನಿಗಳಿಗೆ, ಗಣ್ಯರಿಗೆ 150 ಸಸ್ಯಗಳನ್ನು ವಿತರಿಸಲಾಯಿತು ,ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಯುವ ಸಂಘಟನೆ ಸಂಚಾಲಕ ನಾರಾಯಣ ಪಡುಮಲೆ ವಂದಿಸಿದರು. ಜವನೆರ್ ಬೆದ್ರ ಫೌಂಡೇಶನ್ ಕಾರ್ಯದರ್ಶಿ ದಿನೇಶ್ ನಾಯಕ್ ಟ್ರಸ್ಟಿ ರಾಜೇಶ್ ಕೋಟೆಕರ್, ಜವನೆರ್ ಬೆದ್ರ ರಕ್ತ ನಿಧಿ ಸಂಚಾಲಕ ಮನು ಒಂಟಿ ಕಟ್ಟೆ , ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್, ರಕ್ತ ನಿಧಿ ಮಾರ್ಗದರ್ಶಕ ರಂಜನ್ , ಸಂಘಟನೆಯ ಪ್ರಮುಖರಾದ ಗೀತಾ ಆಚಾರ್ಯ, ರಿತಿಲ್, ಗಣೇಶ್ ಪೈ , ಸಂಪತ್ ಪೂಜಾರಿ, ನಾಗರಾಜ್ ಬೆಳ್ಮಣ್, ಸುರೇಶ್ ಕಾಯರ್ಗುಂಡಿ, ಪುನೀತ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular