Thursday, July 25, 2024
Homeರಾಜ್ಯಹೊಸ ಬೆಂಜ್ ಕಾರಿನ ಗ್ಲಾಸ್ ಒಡೆದು ಕಂತೆ ಕಂತೆ ಹಣ ವಶಪಡಿಸಿಕೊಂಡ ದಿಟ್ಟ ಮಹಿಳಾ ಅಧಿಕಾರಿ

ಹೊಸ ಬೆಂಜ್ ಕಾರಿನ ಗ್ಲಾಸ್ ಒಡೆದು ಕಂತೆ ಕಂತೆ ಹಣ ವಶಪಡಿಸಿಕೊಂಡ ದಿಟ್ಟ ಮಹಿಳಾ ಅಧಿಕಾರಿ

ಬೆಂಗಳೂರು: ಕಾರುಗಳಲ್ಲಿದ್ದ ಅಪಾರ ಮೊತ್ತದ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅನುಮಾನಾಸ್ಪದ ಹೊಸ ಬೆಂಜ್ ಕಾರಿನ ಗ್ಲಾಸ್ ಒಡೆದು ಕಂತೆ ಕಂತೆ ಹಣ ಸೀಜ್ ಮಾಡಿ ಮಹಿಳಾ ಅಧಿಕಾರಿಯೊಬ್ಬರು ದಿಟ್ಟತನ ಮೆರೆದಿದ್ದಾರೆ. ಜಯನಗರದಲ್ಲಿ ಪ್ರಕರಣ ವರದಿಯಾಗಿದೆ. ಪ್ರದೇಶವೊಂದರಲ್ಲಿ ಪೋಲೊ, ಬೆಂಜ್, ಫಾರ್ಚೂನರ್ ಕಾರುಗಳು ನಿಂತಿದ್ದವು. ಕಾರಿನಿಂದ ಬೈಕ್ ಗೆ ಹಣ ತುಂಬಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಬರುತ್ತಿದ್ದಂತೆ ಕಾರಿನಲ್ಲಿದ್ದ ಐವರು ಚೀಲದಲ್ಲಿರುವುದು ಮಾವಿನ ಹಣ್ಣು ಎಂದಿದ್ದಾರೆ. ಆದರೆ ಅಧಿಕಾರಿಗಳು ಪರಿಶೀಲಿಸಲು ಮುಂದಾದಾಗ ಕಾರಿನಲ್ಲಿದ್ದ ಐವರು ಫಾರ್ಚುನಾರ್ ಕಾರು ಹತ್ತಿ ಪರಾರಿಯಾಗಿದ್ದಾರೆ. ಉಳಿದ ಎರಡು ಕಾರು ಮತ್ತು ಬೈಕ್ ಗಳಲ್ಲಿ ಮೂರು ಬ್ಯಾಗ್ ಹಣ ಸಿಕ್ಕಿದೆ ಎಂದು ಎಂಸಿಸಿ ನೋಡಲ್ ಆಫೀಸರ್ ಮನೀಷ್ ಮೌದ್ಗೀಲ್ ತಿಳಿಸಿದ್ದಾರೆ.
ಬೆಂಜ್ ಕಾರಿನ ಗ್ಲಾಸ್ ಒಡೆದು ಹಣ ಇರುವ ಬ್ಯಾಗನ್ನು ಹೊರ ತೆಗೆದಿರುವ ಅಧಿಕಾರಿಗಳು ಕಾರಿನ ಒಳಗಡೆ ಇದ್ದ ದಾಖಲಾತಿ ವಶಕ್ಕೆ ಪಡೆದಿದ್ದಾರೆ. ಕೌಂಟಿಂಗ್ ಮೆಷಿನ್ ಗಳನ್ನು ತರಿಸಿಕೊಂಡು ಅಧಿಕಾರಿಗಳು ಹಣ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.

RELATED ARTICLES
- Advertisment -
Google search engine

Most Popular