ಮುಲ್ಕಿ: ಮುಲ್ಕಿ 9 ಮಾಗಣೆ ಮುಂಡಾಳ ಶಿವ ಸಮಾಜ ಸೇವಾ ಸಂಘ ರಿ ಗೇರುಕಟ್ಟೆ ಮತ್ತು ಇವರ ವತಿಯಿಂದ ಸಂಘದ ಸಭಾಭವನದಲ್ಲಿ ಮುಂಡಾಳ ಸಮುದಾಯದ ವಧು-ವರರ ಅನ್ವೇಷಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು 9 ಮಾಗಣೆ ಮುಂಡಾಳ ಶಿವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸಚ್ಚಿದಾನಂದ ಉದ್ಘಾಟಿಸಿ ಸಮುದಾಯದ ಹೆಣ್ಣು ಮಕ್ಕಳ ಮದುವೆ ವಿಳಂಬವಾಗುತ್ತಿರುವುದು ಕಳವಳಕಾರಿಯಾಗಿದೆ ಈ ನಿಟ್ಟಿನಲ್ಲಿ 9 ಮಾಗಣೆ ಮುಲ್ಕಿ ಶಿವ ಭಕ್ತ ಸಂಘ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಇದರ ಸದುಪಯೋಗವನ್ನು ಸಮುದಾಯದ ಜನತೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ದೇವಪ್ಪ, ಸುಕುಮಾರ್, ಚಂದ್ರಶೇಖರ್, ಭಾಸ್ಕರ್ ಮಾಬಿನ್ ಶ್ರೀಧರ್ ಪಕ್ಷಿಕೆರೆ, ಪ್ರೀತಿ ಲತಾ , ಗುರಿಕಾರರಾದ ದೇವಪ್ಪ ಮುಂತಾದವರು ಭಾಗವಹಿಸಿದ್ದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಸನ ಮುಂತಾದ ಕಡೆಯಿಂದ ಬಂದಂತಹ ಸಮುದಾಯದ ಆಸಕ್ತ ವಧು-ವರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.