Saturday, July 20, 2024
Homeರಾಜ್ಯಮೇಕೆ, ಕತ್ತೆ, ಒಂಟೆ ಹಾಲಿನ ಐಸ್ ಕ್ರೀಮ್ ನಿಂದ ವಾರ್ಷಿಕ 12 ಕೋಟಿ ಲಾಭ ಗಳಿಸುತ್ತಿರುವ...

ಮೇಕೆ, ಕತ್ತೆ, ಒಂಟೆ ಹಾಲಿನ ಐಸ್ ಕ್ರೀಮ್ ನಿಂದ ವಾರ್ಷಿಕ 12 ಕೋಟಿ ಲಾಭ ಗಳಿಸುತ್ತಿರುವ ಆಂಧ್ರದ ಉದ್ಯಮಿ

ಐಸ್ ಕ್ರೀಮ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರಿಗೂ ಅಚ್ಚುಮೆಚ್ಚಿನ ತಿನಿಸು. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಐಸ್ ಕ್ರೀಮ್‌ಗಳಲ್ಲಿ ರಾಸಾಯನಿಕಗಳು ಮತ್ತು ಅಪಾಯಕಾರಿ ಬಣ್ಣಗಳು ಬಳಸಲಾಗುತ್ತವೆ ಎಂಬ ಭಯ ಅನೇಕರಲ್ಲಿ ಇದೆ. ಈ ಕಾರಣದಿಂದಾಗಿ ಕೆಲವರು ಐಸ್ ಕ್ರೀಮ್ ಸವಿಯಲು ಹಿಂಜರಿಯುತ್ತಾರೆ. ಇಂಥ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಆಂಧ್ರ ಪ್ರದೇಶದ ನೆಲ್ಲೂರು ಮೂಲದ ಉದ್ಯಮಿ ಸುಹಾಸ್ ಬಿ. ಶೆಟ್ಟಿ ಆರ್ಗ್ಯಾನಿಕ್ ಐಸ್ ಕ್ರೀಮ್‌ಗಳನ್ನು ಉತ್ಪಾದಿಸಲು ಆರಂಭಿಸಿದರು. ದೇಸಿ ಹಸು, ಕತ್ತೆ, ಒಂಟೆ, ಮೇಕೆ ಹಾಲಿನ ಜೊತೆಗೆ ಮಾವು, ಹಲಸು, ತೆಂಗಿನಕಾಯಿ, ಸಪೋಟಾ ಮುಂತಾದ ಹಣ್ಣುಗಳಿಂದ ಐಸ್ ಕ್ರೀಮ್ ಸಿದ್ಧಪಡಿಸಿ ಮಾರಾಟ ಮಾಡುವ ಮೂಲಕ, ಈಗ ಅವರು ವರ್ಷಕ್ಕೆ 12 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ‘ಐಸ್ ಬರ್ಗ್ ಆರ್ಗ್ಯಾನಿಕ್ ಐಸ್ ಕ್ರೀಮ್’ ಎಂಬ ಇವರ ಬ್ರ್ಯಾಂಡ್, ಆಂಧ್ರ ಪ್ರದೇಶ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಜನಪ್ರಿಯತೆ ಹೊಂದಿದೆ.

ಅಜ್ಜಿಯೇ ಉದ್ಯಮಕ್ಕೆ ಪ್ರೇರಣೆ

ಸುಹಾಸ್ ಶೆಟ್ಟಿ ತಮ್ಮ ಬಾಲ್ಯದಲ್ಲಿ ಅಜ್ಜಿ ಮಾಡಿಕೊಡುತ್ತಿದ್ದ ಐಸ್ ಕ್ರೀಮ್‌ನ್ನು ಸವಿಯುತ್ತಿದ್ದರು. ಬೆಳೆದು ದೊಡ್ಡವರಾದರೂ ಆ ರುಚಿಯನ್ನು ಅವರು ಮರೆಯಲಿಲ್ಲ. ಫಾರ್ಮಸಿಯಲ್ಲಿ ಪಿಎಚ್‌ಡಿ ಪದವಿ ಪಡೆದ ಸುಹಾಸ್, ಫಾರ್ಮಾ ಕಂಪನಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದರು. ಆದರೆ, ತಮ್ಮ ಆಸಕ್ತಿ ಬೇರೆಡೆ ಇದೆ ಎಂಬುದು ಅವರ ಅರಿವಿಗೆ ಬಂತು. ಅಜ್ಜಿ ತಯಾರಿಸುತ್ತಿದ್ದ ಮಾದರಿಯಲ್ಲೇ ಐಸ್ ಕ್ರೀಮ್ ಸಿದ್ಧಪಡಿಸಿ ಮಾರಾಟ ಮಾಡಿದರೆ ಹೇಗೆ ಎಂದು ಯೋಚಿಸಿದರು. ಅಜ್ಜಿ ತಯಾರಿಸುತ್ತಿದ್ದ ರೀತಿಯಲ್ಲಿಯೇ ದೇಸಿ ಹಸುವಿನ ಹಾಲಿನಿಂದ ಯಾವುದೇ ರಾಸಾಯನಿಕ ಬಳಸದೆ ಐಸ್ ಕ್ರೀಮ್ ಸಿದ್ಧಪಡಿಸುವ ಯೋಚನೆ ಅವರಿಗೆ ಬಂತು. ತಮ್ಮ ಸ್ವಂತ ಊರು ನೆಲ್ಲೂರಿನಲ್ಲಿ 2017ರಲ್ಲಿ ಮೊದಲ ಔಟ್‌ಲೆಟ್ ತೆರೆಯುವ ಮೂಲಕ ಮಾರಾಟ ಪ್ರಾರಂಭಿಸಿದರು.

ಐಸ್ ಕ್ರೀಮ್ ಗೆ ಹೆಚ್ಚಿದ ಬೇಡಿಕೆ
ಅಜ್ಜಿ ಕೂಡ ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದರು. ಹೀಗಾಗಿಐಸ್ ಕ್ರೀಮ್ ತಯಾರಿಕೆ, ವ್ಯಾಪಾರದ ಬಗ್ಗೆ ಮಾಹಿತಿ ಕಲೆ ಹಾಕಿದ ಸುಹಾಸ್ ನೆಲ್ಲೂರಿನಲ್ಲಿ ಪುಟ್ಟ ಔಟ್ ಲೆಟ್ ತೆರೆದರು. ಪ್ರಾರಂಭದಲ್ಲಿ ಗಟ್ಟಿ ಹಸುವಿನ ಹಾಲು ಬಳಸಿ 45 ಲೀಟರ್ ಐಸ್ ಕ್ರೀಮ್ ತಯಾರಿಸಿದರು. ಎರಡೇ ದಿನಗಳಲ್ಲಿ ಇಷ್ಟೂ ಐಸ್ ಕ್ರೀಮ್ ಖಾಲಿಯಾಯಿತು. ಹೀಗೆ ದಿನ ಕಳೆದಂತೆ ಸುಹಾಸ್ ಅವರ ಐಸ್ ಕ್ರೀಮ್ ಗೆ ಬೇಡಿಕೆ ಹೆಚ್ಚಿತು. 

ಮೇಕೆ, ಒಂಟೆ, ಕತ್ತೆ ಹಾಲಿನ ಐಸ್ ಕ್ರೀಮ್
ಐಸ್ ಬರ್ಗ್ ಐಸ್ ಕ್ರೀಮ್ ಶೇ.100ರಷ್ಟು ನೈಸರ್ಗಿಕ ಹಾಗೂ ಸಾವಯವ ಐಸ್ ಕ್ರೀಮ್ ಆಗಿದೆ. ಈ ಐಸ್ ಕ್ರೀಮ್ ನಲ್ಲಿ ಸಕ್ಕರೆ ಬದಲಿಗೆ ನೈಸರ್ಗಿಕ ಸಿಹಿ ಬಳಸಲಾಗುತ್ತದೆ. ಹಾಗೆಯೇ ಈ ಉತ್ಪನ್ನಗಳಲ್ಲಿ ಯಾವುದೇ ರಾಸಾಯನಿಕ ಸಂರಕ್ಷಕಗಳನ್ನು ಬಳಸೋದಿಲ್ಲ. ಇನ್ನು ಪ್ರಾರಂಭದಲ್ಲಿ ದೇಸಿ ಹಸುವಿನ ಹಾಲಿನಿಂದ ಐಸ್ ಕ್ರೀಮ್ ತಯಾರಿಸುತ್ತಿದ್ದ ಸುಹಾಸ್, ಆ ಬಳಿಕ ಒಂಟೆ, ಕತ್ತೆ, ಮೇಕೆ ಹಾಲಿನಿಂದ ಐಸ್ ಕ್ರೀಮ್ ತಯಾರಿಸಲು ಪ್ರಾರಂಭಿಸಿದರು. ಇನ್ನು ಮಾವು, ಹಲಸು, ಸಪೋಟಾ, ತೆಂಗಿನಕಾಯಿ ಬಳಸಿ ಕೂಡ ಐಸ್ ಕ್ರೀಮ್ ಸಿದ್ಧಪಡಿಸಲಾಗುತ್ತಿದೆ. 

ಸೌರಶಕ್ತಿ ಬಳಕೆ
ಇನ್ನು ಐಸ್ ಬರ್ಗ್ ಐಸ್ ಕ್ರೀಮ್ ಫ್ಯಾಕ್ಟರಿ ಸೋಲಾರ್ ವಿದ್ಯುತ್ ನಿಂದಲೇ ಕಾರ್ಯನಿರ್ವಹಿಸುತ್ತಿದೆ. ಇನ್ನು ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸಿದ ತ್ಯಾಜ್ಯನೀರನ್ನು ETP ಸ್ಥಾವರ ಬಳಸಿಕೊಂಡು ಮರುಬಳಕೆ ಮಾಡಲಾಗುತ್ತಿದೆ. ಹೀಗೆ ಮರುಬಳಕೆ ಮಾಡಿದ ನೀರನ್ನು ತೋಟಗಾರಿಕೆಗೆ ಬಳಸಲಾಗುತ್ತಿದೆ. 

12 ಕೋಟಿ ಆದಾಯ
ಐಸ್ ಬರ್ಗ್ ಬ್ರ್ಯಾಂಡ್ ಪ್ರಸ್ತುತ 70 ಮಳಿಗೆಗಳನ್ನು ಹೊಂದಿದೆ. ಇದರಲ್ಲಿ ಕಂಪನಿ ಮಾಲೀಕತ್ವದ ಹಾಗೂ ಫ್ರಾಂಚೈಸಿ ಮಳಿಗೆಗಳು ಸೇರಿವೆ. ಇನ್ನು ಈ ಬ್ರ್ಯಾಂಡ್ ವರ್ಷಕ್ಕೆ 12 ಕೋಟಿ ಆದಾಯ ಗಳಿಸುತ್ತಿದೆ. 

RELATED ARTICLES
- Advertisment -
Google search engine

Most Popular