ಹೈದರಾಬಾದ್: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಮಗು ಸೇರಿ ಆರು ಮಂದಿ ಮರಣವನ್ನಪ್ಪಿದ ಘಟನೆ ನಡೆದಿದೆ. ಕೊಡಾಡ್ ಪಟ್ಟಣದ ದುರ್ಗಾಪುರಂ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಹೈದರಾಬಾದ್ ಮೂಲದ ಮಾಣಿಕ್ಯಮ್ಮ, ಚಂದರ್ ರಾವ್, ಕೃಷ್ಣಂರಾಜು, ಸ್ವರ್ಣ, ಶ್ರೀಕಾಂತ್ ಮತ್ತು ಲಾಸ್ಯ ಮೃತರು ಎಂದು ಗುರುತಿಸಲಾಗಿದೆ. ಹೈದರಾಬಾದ್ ನಿಂದ ವಿಜಯವಾಡಕ್ಕೆ ಹೋಗುತ್ತಿದ್ದಾಗ ಮುತ್ತಂಗಿ ಬಳಿ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೂರು ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಅಪಘಾತವೊಂದು ಸಂಭವಿಸಿ ಹಲವು ಮಂದಿ ಮೃತಪಟ್ಟಿದ್ದರು.