Saturday, July 20, 2024
Homeಅಪರಾಧರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಸ್ಟಂಟ್ ಮಾಡಿದ ಮೂವರು ಯುವಕರ ವಿರುದ್ಧ ಕೇಸು ದಾಖಲು

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಸ್ಟಂಟ್ ಮಾಡಿದ ಮೂವರು ಯುವಕರ ವಿರುದ್ಧ ಕೇಸು ದಾಖಲು

ಬ್ರಹ್ಮಾವರ: ಅಪಾಯಕಾರಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಟಂಟ್ ನಡೆಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆ ಬ್ರಹ್ಮಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಧು ಬಿ ಇ ರೌಂಡ್ಸ್ ನಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಸ್ಟಂಟ್ ಮಾಡುತ್ತಿರುವ ವಿಡಿಯೊವೊಂದು ಹರಿದಾಡುತ್ತಿತ್ತು. ಇದನ್ನು ಗಮನಿಸಿ ಅವರು ಕ್ರಮ ಕೈಗೊಂಡಿದ್ದಾರೆ. ಎನ್ ಎಚ್ 66ರಲ್ಲಿ ಬ್ರಹ್ಮಾವರ ಮದರ್ ಪ್ಯಾಲೇಸ್ ಕಡೆಯಿಂದ ರಾಯಲ್ ಇನ್ ಹೋಟೆಲ್ ತನಕ ಅಪರಿಚಿತ ಮೂವರು ನಂಬರ್ ಪ್ಲೇಟ್ ಇಲ್ಲದ ಮೋಟಾರು ಸೈಕಲ್ ನಲ್ಲಿ ಹೆಲ್ಮೆಟ್ ಧರಿಸದೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಪ್ರಯಾಣಿಸುತ್ತಿದ್ದರು. ಬೈಕ್ ಸ್ಟಾಂಡ್ ಅನ್ನು ರಸ್ತೆಗೆ ತಾಗಿಸಿಕೊಂಡು, ಬೆಂಕಿ ಬರುವ ರೀತಿಯಲ್ಲಿ ಸವಾರಿ ಮಾಡಿ ಜನರಿಗೆ ಭಯವನ್ನುಂಟು ಮಾಡಿದ್ದಾರೆ. ಏ 10ರಂದು ರಾತ್ರಿ 11:30ರ ಗಂಟೆಗೆ ಈ ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular