ಮೂಡಿಗೆರೆ: ಮೇಯಲು ಬಿಟ್ಟಿದ್ದ ಹಸುವನ್ನು ಹುಲಿಯೊಂದು ಕೊಂದು ಹಾಕಿರುವ ಘಟನೆ ಮೂಡಿಗೆರೆ ತಾಲೂಕಿನ ನಿಡುವಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಕಲ್ ಗ್ರಾಮದಲ್ಲಿ ನಡೆದಿದೆ.
ಮರ್ಕಲ್ ಗ್ರಾಮದ ನರೇಂದ್ರ ಗೌಡ ಅವರು ತಮ್ಮ ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಹುಲಿ ದಾಳಿ ನಡೆಸಿ, ಅರ್ಧ ದೇಹವನ್ನು ತಿಂದು ಹಾಕಿದೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಉದಯ್, ಅರಣ್ಯ ಅಧಿಕಾರಿ ಗಿರೀಶ್ ಮೊದಲಾದವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮೂಡಿಗೆರೆಯಲ್ಲಿ ಹುಲಿ ದಾಳಿಗೆ ಹಸು ಬಲಿ
RELATED ARTICLES