ಎಸ್ ಎನ್ ಎಂ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್ ಘಟಕದ ವತಿಯಿಂದ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ತೀರಾ ಗ್ರಾಮೀಣ ಪ್ರದೇಶವಾದ ಕುಕ್ಕೇಡಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಸಮುದಾಯದತ್ತ ನಮ್ಮ ಸೇವೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್ ಘಟಕದ ಆಯ್ದ 55 ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಶಾಲಾ ಪರಿಸರದ ಸ್ವಚ್ಛತೆ , ತೆಂಗಿನ ಮರದ ಬುಡ ಬಿಡಿಸುವುದು , ಆಟದ ಮೈದಾನದ ಹುಲ್ಲು ತೆಗೆಯುವುದು , ಕಟ್ಟಿಗೆ ರಾಶಿ ಹಾಕುವ ಕೆಲಸದ ಜೊತೆಗೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಟದೊಂದಿಗೆ ಪಾಠ ಎಂಬ ಚಟುವಟಿಕೆ ಮೂಲಕ ಹಲವಾರು ಹೊರಾಂಗಣ, ಒಳಾಂಗಣ ಆಟ, ಸ್ಪೂರ್ತಿದಾಯಕ ವಿಡಿಯೋ ಪ್ರದರ್ಶನ ಇತ್ಯಾದಿ ಕಾರ್ಯಕ್ರಮ ನಡೆಸಿದರು.
ಎನ್.ಎಸ್.ಎಸ್ ವಿದ್ಯಾರ್ಥಿಗಳ ಪರವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಹಾಗು ಸಣ್ಣ ಉಡುಗೊರೆಯನ್ನು ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲವಾಗಿ ಆ ಶಾಲೆಯ ವಿದ್ಯಾರ್ಥಿಗಳ ಹೆತ್ತವರು ಭಾಗವಹಿಸಿ ಸ್ವಯಂಸೇವಕರಿಗೆ ಸ್ಪೂರ್ತಿಯಾದರು. ಅಷ್ಟೇ ಅಲ್ಲದೆ ಆ ಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ರವರು ತಮ್ಮ ಚುರುಕುತನದಿಂದ ವಿದ್ಯಾರ್ಥಿಗಳ ಮನ ಸೆಳೆದರು. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಸಹ ಭೋಜನ ಎಲ್ಲರ ಮನಸ್ಸಿಗೆ ಮುದ ನೀಡಿತು. ಸಂಪೂರ್ಣ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ರಾಮಪ್ರಸಾದ್ ಎಂ, ಗೋಪಾಲಕೃಷ್ಣ ಕೆ ಎಸ್ ಹಾಗೆ ಶಾಲಾ ಶಿಕ್ಷಕ ವೃಂದ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅದ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.