Saturday, July 20, 2024
Homeಅಪಘಾತಶಾಲೆಯಲ್ಲಿ ಬಿಸಿ ಬೇಳೆ ಬಾತ್ ಕೆಳಗಿಡುವಾಗ ಅವಘಡ: ಕಾರ್ಯಕರ್ತೆ ಸಾವು

ಶಾಲೆಯಲ್ಲಿ ಬಿಸಿ ಬೇಳೆ ಬಾತ್ ಕೆಳಗಿಡುವಾಗ ಅವಘಡ: ಕಾರ್ಯಕರ್ತೆ ಸಾವು

ಕನಕಪುರ: ಇಲ್ಲಿನ ಆರ್‌.ಇ.ಎಸ್ ಸಂಸ್ಥೆ ಆರ್.ಎಂ.ಪಿ.ಎಚ್.ಎಸ್ ಗ್ರಾಮಾಂತರ ಬಾಲಕರ ಪ್ರೌಢಶಾಲೆಯಲ್ಲಿ ಒಲೆಯಿಂದ ಬಿಸಿ ಬೇಳೆ ಬಾತ್ ಕೆಳಗಿಡುವಾಗ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದ ಬಿಸಿಯೂಟ ಕಾರ್ಯಕರ್ತೆ ಸೋಮವಾರ ಮೃತಪಟ್ಟಿದ್ದಾರೆ.

ಶಾಲೆಯಲ್ಲಿ ಕೆಲವು ವರ್ಷಗಳಿಂದ ಬಿಸಿಯೂಟ ತಯಾರಿಸುತ್ತಿದ್ದ ಹಲಸಿನಮರದೊಡ್ಡಿ ಗೌರಮ್ಮ (55) ಮಾರ್ಚ್ 15ರಂದು ಪಾತ್ರೆ ಕೈ ಜಾರಿ ಬಿಸಿ ಬೇಳೆ ಬಾತ್‌ ಮೈ ಮೇಲೆ ಚೆಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಇವರೊಂದಿಗೆ ಮತ್ತಿಬ್ಬರು ಸಹಾಯಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular