ಮಂಗಳೂರು: ಲೋಕಸಭಾ ಚುನಾವಣೆ ಪ್ರಯುಕ್ತ ರಾಜ್ಯಕ್ಕೆ ಮೋದಿಯವರ ಆಗಮನವಾಗಿದ್ದು, ಮೈಸೂರು, ಮಂಗಳೂರಲ್ಲಿ ಮೋದಿ ರಣಕಹಳೆ ಊದಿದ್ದಾರೆ. ಆದರೆ ಪ್ರಧಾನಿಯವರು ಬಿಜೆಪಿ ಭದ್ರ ಕೋಟೆ ಮಂಗಳೂರಿನಲ್ಲಿ ರೋಡ್ ಶೋ ನಡೆಸುವ ವೇಳೆ 50 ಮೀ ದೂರದಲ್ಲಿ ಅಗ್ನಿ ಅವಗಡ ಸಂಭವಿಸಿದೆ.
ಮಂಗಳೂರು ನಗರದಲ್ಲಿ 7.45ರ ಸುಮಾರಿಗೆ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭಿಸಿದರು. ಈ ರೋಡ್ ಶೋ ಪಕ್ಕದಲ್ಲೇ ಅಗ್ನಿ ಅವಘಡ ಸಂಭವಿಸಿದೆ.
ಲಾಲ್ಬಾಗ್ ಸರ್ಕಲ್‌ನ, ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಮುಂಭಾಗದಲ್ಲಿರುವ ಭಾರತ್ ಮಾಲ್ ಬಳಿಯ ಮೆಡಿಕಲ್ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಧಾನಿ ಮೋದಿ ರೋಡ್ ಶೋನಿಂದ ಕೇವಲ 50 ಮೀಟರ್ ಅಂತರದಲ್ಲಿ ಅವಘಡ ಸಂಭವಿಸಿದ್ದು, ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿಯನ್ನು ನಂದಿಸಲಾಗಿದೆ.