ಮುಲ್ಕಿ: ತುಳುನಾಡ್ ಬಂಟ ಮಹಿಳಾ ಸಂಘದ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಮುಲ್ಕಿ ಸಮೀಪದ ಕೆಂಚನಕೆರೆ ಅಂಬಾ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಂಘದ ಅಧ್ಯಕ್ಷೆ ಶಮೀನಾ ಆಳ್ವ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪರಿಸರ ಪ್ರೇಮಿ ಸುಮತಿ ಶೆಟ್ಟಿ ಕೆಮ್ರಾಲ್ ರವರು ಹಿಂದಿನ ಕಾಲದ ಆಷಾಢ ಮಾಸದ ಬಗ್ಗೆ ಮಾಹಿತಿ ನೀಡಿ ಮೊಬೈಲ್ ತಂತ್ರಜ್ಞಾನದ ಯುಗದಲ್ಲಿ ಹಿಂದಿನ ಕಾಲದ ಆಷಾಢ ಮಾಸದ ಕಷ್ಟದ ದಿನಗಳು ಅಮೂಲ್ಯವಾಗಿದ್ದು ಅದನ್ನು ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,ತುಳುನಾಡ್ ಬಂಟ ಮಹಿಳಾ ಸಂಘದ ಉಪಾಧ್ಯಕ್ಷೆ ರೋಹಿಣಿ ಶೆಟ್ಟಿ, ಕಾರ್ಯದರ್ಶಿ ಕುಸುಮಾ ಆರ್ ಶೆಟ್ಟಿ, ಅಮೂಲ್ಯ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ವಿಘ್ನೇಶ್ ಹಾಗೂ ಶ್ರಾವ್ಯ ರವರನ್ನು ಗೌರವಿಸಲಾಯಿತು. ಅಮೂಲ್ಯ ಉಮೇಶ್ ನಿರೂಪಿಸಿದರು.
ಬಳಿಕ ಸಂಘದ ಸದಸ್ಯರು ಆಷಾಡ ಮಾಸದ ವಿವಿಧ ತಿಂಡಿಗಳ ಸವಿಯುಟ ಮಾಡಿ ಸಂಭ್ರಮಿಸಿದರು.
ತುಳುನಾಡ್ ಬಂಟ ಮಹಿಳಾ ಸಂಘದ ವತಿಯಿಂದ ಆಟಿದ ಕೂಟ
RELATED ARTICLES