ಮುಲ್ಕಿ: ಇಲ್ಲಿಗೆ ಸಮೀಪದ ಪಡುಪಣಂಬೂರು ಹೊಯ್ಗೆ ಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕ ಹಾಗೂ ಆಡಳಿತ ಮೊಕ್ತೇಸರ ರಂಗನಾಥ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ನಗರ ಭಜನಾ ಸಂಕೀರ್ತನೆ, ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ, ದೇವಸ್ಥಾನದ ಚಿಕ್ಕ ಮೇಳದ ತಿರುಗಾಟ ಮುಕ್ತಾಯ , ಮಹಾಪೂಜೆ , ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.