ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಉದ್ಯಮಿಯೊಬ್ಬರ ಕುಟುಂಬವೊಂದು ತಮ್ಮ ಬದುಕಿನಲ್ಲಿ ಅದೃಷ್ಟ ತಂದು ಕೊಟ್ಟ ಕಾರಿಗೆ ಅದ್ಧೂರಿ ಸಮಾಧಿ ಕಾರ್ಯಕ್ರಮವನ್ನು ನಡೆಸಿದ್ದು ಸದ್ಯ ಭಾರೀ ಸುದ್ದಿಯಾಗುತ್ತಿದೆ. ಲಾಠಿ ತಾಲೂಕಿನ ಪಾದರಶಿಂಗ ಗ್ರಾಮದಲ್ಲಿ ಗುರುವಾರ ಸಂಜಯ ಪೋಲಾರ್ ಮತ್ತು ಕುಟುಂಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಆಧ್ಯಾತ್ಮಿಕ ಮುಖಂಡರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಚಿತ್ರವೂ , ವಿಶೇಷವೂ ಎನಿಸುವ ಸಮಾಧಿ ಕಾರ್ಯಕ್ರಮದ ವಿಡಿಯೋದಲ್ಲಿ 12 ವರ್ಷ ಹಳೆಯದಾದ ವ್ಯಾಗನ್ ಆರ್ ಕಾರನ್ನು ಜಮೀನಿನಲ್ಲಿ 15 ಅಡಿ ಆಳದ ಹೊಂಡವನ್ನು ಅಗೆದು ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಸಮಾಧಿ ಮಾಡಿರುವುದನ್ನು ಕಾಣಬಹುದಾಗಿದೆ.
ಹೂವುಗಳು ಮತ್ತು ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ಹ್ಯಾಚ್‌ಬ್ಯಾಕ್ ಅನ್ನು ಅವರ ಮನೆಯಿಂದ ಪೋಲಾರನ ಜಮೀನಿಗೆ ಬಹಳ ಸಂಭ್ರಮದಿಂದ ತೆಗೆದುಕೊಂಡು ಹೋಗಿ, ಇಳಿಜಾರಿನಲ್ಲಿ ಓಡಿಸಿ ಹಳ್ಳದಲ್ಲಿ ಇರಿಸಲಾಯಿತು.
ವಾಹನಕ್ಕೆ ಹಸುರು ಬಟ್ಟೆಯನ್ನು ಹೊದಿಸಿ, ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ಕುಟುಂಬಸ್ಥರು ಪೂಜೆ ಸಲ್ಲಿಸಿ ಗುಲಾಬಿ ದಳಗಳನ್ನು ಸುರಿಸುವುದರ ಮೂಲಕ ಕಾರನ್ನು ಸಮಾಧಿ ಹೊಂಡಕ್ಕೆ ಇಳಿಸಲಾಗಿದೆ.ಜೆಸಿಬಿ ಬಳಸಿ ಮಣ್ಣು ಸುರಿದು ಕಾರನ್ನು ಹೂಳಲಾಗಿದೆ.
ಸೂರತ್‌ನಲ್ಲಿ ಕನ್‌ಸ್ಟ್ರಕ್ಷನ್ ಉದ್ಯಮಿಯಾಗಿರುವ ಪೋಲಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಭವಿಷ್ಯದ ಪೀಳಿಗೆಗಳು ಕುಟುಂಬಕ್ಕೆ ಅದೃಷ್ಟವನ್ನು ಸಾಬೀತುಪಡಿಸಿದ ಕಾರನ್ನು ನೆನಪಿಟ್ಟುಕೊಳ್ಳಲು ವಿಭಿನ್ನವಾದದ್ದನ್ನು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
“ನಾನು ಕಾರನ್ನು 12 ವರ್ಷಗಳ ಹಿಂದೆ ಖರೀದಿಸಿದ್ದೆ. ಅದು ಕುಟುಂಬಕ್ಕೆ ಸಮೃದ್ಧಿಯನ್ನು ತಂದಿದೆ. ವ್ಯಾಪಾರದಲ್ಲಿ ಯಶಸ್ಸನ್ನು ಕಂಡಿದ್ದಲ್ಲದೆ, ನನ್ನ ಕುಟುಂಬವೂ ಗೌರವವನ್ನು ಗಳಿಸಿತು. ವಾಹನ ನನ್ನ ಕುಟುಂಬ ಮತ್ತು ನನಗೆ ಅದೃಷ್ಟವನ್ನು ಸಾಬೀತುಪಡಿಸಿತು. ಹಾಗಾಗಿ ಅದನ್ನು ಮಾರುವ ಬದಲು ನನ್ನ ಜಮೀನಿನಲ್ಲಿ ಸಮಾಧಿಯನ್ನು ಮಾಡಿದ್ದೇನೆ. ಸಮಾರಂಭಕ್ಕೆ 4 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ, ಸಮಾಧಿ ಸ್ಥಳದಲ್ಲಿ ಗಿಡವನ್ನು ನೆಡಲಾಗುತ್ತದೆ’ ಎಂದು ಹೇಳಿದರು.
https://x.com/KamitSolanki/status/1854806989173670396?ref_src=twsrc%5Etfw%7Ctwcamp%5Etweetembed%7Ctwterm%5E1854806989173670396%7Ctwgr%5Ef0f37d9f5c15734352f651345dc240f3bed916fc%7Ctwcon%5Es1_c10&ref_url=https%3A%2F%2Fapi