Friday, March 21, 2025
Homeಮೂಡುಬಿದಿರೆನಾರಾವಿಯಲ್ಲಿ ಸ್ತ್ರೀ ಶಕ್ತಿಯ ಮಹಾ ಸಂಗಮ

ನಾರಾವಿಯಲ್ಲಿ ಸ್ತ್ರೀ ಶಕ್ತಿಯ ಮಹಾ ಸಂಗಮ

ನಾರಾವಿಯಲ್ಲಿ ಶ್ರೀ ದುರ್ಗಾ ಸ್ವರೂಪಿ ಮಾತೆಯರ ನೇತೃತ್ವದಲ್ಲಿ ನಾರಾವಿ ಮಹಾ ಚಂಡಿಕಾ ಯಾಗ 2024 ಇದರ ಮಾಹಿತಿ ಕಛೇರಿ ಉದ್ಘಾಟನಾ ಸಮಾರಂಭ ನಡೆಯಿತು.

ಚಂಡಿಕೆ – ಸ್ತ್ರೀ ಶಕ್ತಿಯ ಮಹಾ ಅವತಾರ.

ಲೋಕ ಕಂಟಕನಾಗಿ ಮೆರೆಯುತ್ತಿದ್ದ ಮಹಿಷಾಸುರ ಮತ್ತು ಆತನ ದುಷ್ಟ ರಾಕ್ಷಸ ಕೂಟವನ್ನು ಮಣಿಸಲು ತ್ರಿಮೂರ್ತಿಗಳು ಕೂಡ ಅಸಾಹಯಕರಾದಾಗ ಜಗನ್ಮಾತೆ ಶ್ರೀ ಮಹಾದೇವಿ, ಮಹಾ ಶ್ರೀ ಶಕ್ತಿ ದುರ್ಗಾ ಪರಮೇಶ್ವರಿ ದೇವಿಯ ಅವತಾರ ಆಗಬೇಕಾಯಿತು.

ಬ್ರಹ್ಮ ವಿಷ್ಣು ಮಹೇಶ್ವರಯಾದಿಯಾಗಿ ಮುಕ್ಕೋಟಿ ದೇವತೆಗಳ ಪರಿಪರಿ ಸ್ತುತಿಯಿಂದ ಅವತಾರಗೊಂಡ ಶ್ರೀ ದೇವಿಯು ಮಹಿಷಾಸುರ ಮರ್ದಿನಿಯಾಗಿ, ದುಷ್ಟ ಸಂಹಾರಿಯಾಗಿ ಭಕ್ತರನ್ನು ಹರಸಿ ಆಶೀರ್ವದಿಸಿ ಲೋಕಕಲ್ಯಾಣವನ್ನುಂಟು ಮಾಡುತ್ತಾಳೆ.

ಶ್ರೀ ಜಗನ್ಮಾತೆ ಶ್ರೀದೇವಿಯು ಸ್ತ್ರೀ ಶಕ್ತಿಯ ಪರಿಚಯವನ್ನು ಸಮಸ್ತ ಬ್ರಹ್ಮಾಂಡಕ್ಕೆ ಪರಿಚಯಿಸಿ, ಮಹಿಷಾಸುರ ವಧೆಯ ಮೂಲಕ ಲೋಕಕ್ಕೆ ಸ್ತ್ರೀ ಶಕ್ತಿಯ ಅನಾವರಣ ಮಾಡಿರುವುದಕ್ಕೆ ಪೂರಕವೆಂಬಂತೆ ನಾರಾವಿಯಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾ ಚಂಡಿಕಾ ಯಾಗದ ಮಾಹಿತಿ ಕಛೇರಿಯ ಉದ್ಘಾಟನೆಯು ನಾರಾವಿಯ ಐದು ಮಾಗಣೆಯ ಮಹಾ ಮಾತೆಯರ – ಸ್ರ್ತೀ ಶಕ್ತಿಗಳ ಮುಂದಾಳುತ್ವದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ, ಭಕ್ತಿ ಗೌರವದಿಂದ ಅಚ್ಚುಕಟ್ಟಾಗಿ ನಡೆದು ಒಂದು ವಿಶಿಷ್ಟ ಧಾರ್ಮಿಕ ಸಂಪ್ರದಾಯಕ್ಕೆ ನಾಂದಿಯಾಯಿತು.

2024 ಡಿಸೆಂಬರ್ 22 ಆದಿತ್ಯವಾರದಂದು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ವಠಾರದಲ್ಲಿ ನಡೆಯಲಿರುವ ಮಹಾ ಚಂಡಿಕಾ ಯಾಗದಲ್ಲಿ ಶ್ರೀ ದುರ್ಗಾಪರಮೇಶ್ವರಿಯ ಭಕ್ತರು ಪಾಲ್ಗೊಂಡು ಜಗನ್ಮಾತೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

RELATED ARTICLES
- Advertisment -
Google search engine

Most Popular